‘ವಿವಿದ್’ ಹೋಲ್ಸೇಲ್ ಪಾರ್ಲರ್ ಆ್ಯಂಡ್ ಕಾಸ್ಮೇಟಿಕ್ ಪ್ರೋಡಕ್ಸ್ ಮಳಿಗೆ ಶುಭಾರಂಭ

ಉಡುಪಿ: ನಗರದ ಡಯಾನ ಸರ್ಕಲ್, ಪಾಂಡುರಂಗ ಟವರ್, ಎಚ್ಡಿಎಫ್ಸಿ ಬ್ಯಾಂಕ್ ನ ಸಮೀಪ ವಿವಿಧ ಹೋಲ್ಸೇಲ್ ಪಾರ್ನರ್ ಅಂಡ್ ಕಾಸ್ಮೇಟಿಕ್ ಪ್ರೋಡಕ್ಟ್ ಮಳಿಗೆಯು ಜುಲೈ 11ರಂದು ಶುಭಾರಂಭಗೊಂಡಿದೆ. ಮಳಿಗೆಯಲ್ಲಿ ಪಾರ್ಲರ್ ಅಂಡ್ ಕಾಸ್ಮೇಟಿಕ್ ಫ್ಯಾನ್ಸಿ ಉತ್ಪನ್ನಗಳು ಹೋಲ್ಸೇಲ್ ಹಾಗೂ ರೀಟೇಲ್ ದರದಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಉತ್ಪನ್ನಗಳನ್ನು ಕಲ್ಪಿಸಿದೆ. ಮಳಿಗೆಯಲ್ಲಿ ಕಂಪನಿ ಬ್ರಾಂಡ್ ಗಳಾದ ಮೇಬಿಲ್ಯಾನ್ ನ್ಯೂಯಾರ್ಕ್, ಗಾರ್ನಿಯರ್, ಲೋರಿಯಲ್, ಸ್ಟಾಕ್ಸ್, ಮ್ಯಾಟ್ರಿಕ್ಸ್, ಮ್ಯಾಕ್, ಟಿಬಿಸಿ, ಲ್ಯಾಕ್ಮೆ, ಹೂಡ್ ಬ್ಯೂಟಿ, ಹಿಲಾರಿ ರೋಡ, ಮಿ-ಯಾನ್ […]
ತುಳುನಾಡ ಸಂಸ್ಕೃತಿ ದೇಶದ ಬೇರೆಲ್ಲೂ ಕಾಣಸಿಗದು: ತುಳಸಿ ದೇವಾಡಿಗ

ಉಡುಪಿ: ತುಳುನಾಡಿನಲ್ಲಿ ನಾವು ಆಚರಿಸುವ ಸಂಸ್ಕೃತಿ, ಸಂಪ್ರದಾಯಗಳು ಬಹಳ ವೈಶಿಷ್ಟ್ಯತೆ ಹೊಂದಿವೆ. ಈ ವಿಶಿಷ್ಟ ಸಂಸ್ಕೃತಿ ದೇಶದ ಬೇರೆಲ್ಲೂ ಕಾಣಸಿಗದು. ಆದರೆ ನಮ್ಮದೇ ಕೆಲವೊಂದು ತಪ್ಪಿನಿಂದ ತುಳು ಸಂಸ್ಕೃತಿ ಅವನತಿಯ ಕಡೆಗೆ ಸಾಗುತ್ತಿದೆ ಎಂದು ನಿವೃತ್ತ ಸೈನಿಕ ಶಿಕ್ಷಕಿ ತುಳಸಿ ದೇವಾಡಿಗ ಕಟಪಾಡಿ ಹೇಳಿದರು. ತುಳುಕೂಟ ಉಡುಪಿ ವತಿಯಿಂದ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ ಮದರೆಂಗಿದ ರಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಹಿಂದಿನ ಸಂಸ್ಕೃತಿ ಹಾಗೂ ಈಗಿನ ಸಂಸ್ಕೃತಿಯಲ್ಲಿ ಬಹಳಷ್ಟು ವ್ಯಾತ್ಯಾಸಗಳಾಗಿವೆ. […]
ಉಡುಪಿಯಲ್ಲಿ ‘ಕಲಾಸಿಲ್ಕ್ ಕಾಟನ್ ಎಕ್ಸ್‌ಪೋ- 2019’ ಮಾನ್ಸೂನ್ ಸ್ಪೆಷಲ್ ಆಫರ್ ಶೇ.65 ದರ ಕಡಿತ ಮಾರಾಟ

ಉಡುಪಿ: ದೇಶದ ವಿವಿಧ ಭಾಗದಲ್ಲಿ ದೊರೆಯುವ ಎಲ್ಲಾ ವಸ್ತುಗಳು ಇದೀಗ ಬನ್ನಂಜೆ, ಮಲ್ಪೆ ಉಡುಪಿ ರಸ್ತೆಯಲ್ಲಿರುವ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಮೊದಲ ಬಾರಿಗೆ ಕಲಾಸಿಲ್ಕ್ ಕಾಟನ್ ಎಕ್ಸ್‌ಫೋ 2019 ದಲ್ಲಿ ಹ್ಯಾಂಡ್ ಲೂಮ್ ಮತ್ತು ಹ್ಯಾಂಡಿಕ್ರಾಫ್ಟ್ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಈಗಾಗಲೇ ಪ್ರಾರಂಭಗೊಂಡಿದೆ. ಮಾನ್ಸೂನ್ ಸ್ಪೆಷಲ್ ಆಫರ್ ಶೇ.65 ದರ ಕಡಿತ ಮಾರಾಟ ಬೆಳಗ್ಗೆ 10ರಿಂದ ರಾತ್ರಿ 9.30ರ ವರೆಗೆ ನಡೆಯುತ್ತಿದೆ. ಪ್ರದರ್ಶನದಲ್ಲಿ 24 ರಾಜ್ಯದ ವಸ್ತುಗಳ 100 ಕೌಂಟರ್‌ಗಳು ಇವೆ. ಇದರಲ್ಲಿ ಆಂಧ್ರ […]
ಮೈತ್ರಿ ಸರಕಾರ ಉರುಳಿಸಲು ಬಿಜೆಪಿ ಷಡ್ಯಂತ್ರ: ವಿನಯ ಕುಮಾರ್ ಸೊರಕೆ

ಉಡುಪಿ: ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಲು ಬಿಜೆಪಿ ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದೆ. ರಾಜ್ಯ ಮೈತ್ರಿ ಸರ್ಕಾರವನ್ನು ಉರುಳಿಸಲು ಷಡ್ಯಂತ್ರ ಮಾಡುತ್ತಿದ್ದು, ಇದರಲ್ಲಿ ಕರ್ನಾಟಕದ ರಾಜ್ಯಪಾಲರು ಸೇರಿ ಕೊಂಡಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಹಣದ ಆಮಿಷವೊಡ್ಡಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಜ್ಜರಕಾಡಿನ ಸೈನಿಕರ ಹುತಾತ್ಮ ಸ್ಮಾರಕದ ಎದುರು ಬುಧವಾರ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. […]
ಉಡುಪಿ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ

ಉಡುಪಿ: ಪಬ್ಲಿಕ್ ಸ್ಕೂಲ್ ಬದಲಾಗಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಬೇಕು ಹಾಗೂ ಸೇವಾ ಜೇಷ್ಠತೆ ಆಧಾರದಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆರು ಹಾಗೂ ಸಹಾಯಕಿಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರಾಜ್ಯದಲ್ಲಿ 62,580 ಅಂಗನವಾಡಿ ಕೇಂದ್ರಗಳು […]