ಅಧ್ಯಯನ ಕೇಂದ್ರವಾಗಲಿರುವ ಸೈಂಟ್ ಮೇರೀಸ್ ದ್ವೀಪ

ಉಡುಪಿ: ಮಲ್ಪೆಯ ಸೈಂಟ್ ಮೇರೀಸ್ ದ್ವೀಪವನ್ನು ಅಧ್ಯಯನ ಕೇಂದ್ರವಾಗಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಚಿಂತನೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ. ಸೈಂಟ್ ಮೇರೀಸ್ ದ್ವೀಪವನ್ನು ಕೇವಲ ಪ್ರವಾಸಿ ತಾಣವೆಂದು ಬಗೆಯದೆ, ಎಲ್ಲರಿಗೂ ಪ್ರಯೋಜನವಾಗುವ ನಿಟ್ಟಿನಲ್ಲಿ ಅದನ್ನು ಅಧ್ಯಯನ ಕೇಂದ್ರವಾಗಿ ಮಾರ್ಪಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಅವರು ಹೇಳಿದರು. ದ್ವೀಪದಲ್ಲಿ ನಡೆಯುತ್ತಿರುವ ಅವಘಡಗಳನ್ನು ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉಪ ಸಮಿತಿಯೊಂದನ್ನು ರಚಿಸಿದ್ದು, ಸಮಿತಿಯು ಸ್ಥಳ ಪರಿಶೀಲನೆ […]

ಲಯನ್ಸ್ ಕ್ಲಬ್ ಹಿರಿಯಡ್ಕ ಪ್ರಾಂತೀಯ ಅಧ್ಯಕ್ಷ, ಮೊದಲ ಮತ್ತು ದ್ವಿತೀಯ ಉಪ ಗವರ್ನರ್ ಗಳ ಭೇಟಿ

  ಉಡುಪಿ: ಆದಿತ್ಯವಾರದಂದು ಲಯನ್ಸ್ ಕ್ಲಬ್ ಹಿರಿಯಡ್ಕದಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಶಂಕರ್ ಶೆಟ್ಟಿ ಮತ್ತು ಮೊದಲ ಉಪ ಗವರ್ನರ್ ಎಮ್ ಕೆ ಭಟ್ ಮತ್ತು ದ್ವಿತೀಯ ಉಪ ಗವರ್ನರ್ ಡಾ. ನೇರಿ ಕರ್ನಿಲೀಯೋ ಭೇಟಿ ನೀಡಿ ಕ್ಲಬ್ ನ ಕಾರ್ಯ ಚಟುವಟಿಕೆಗಳ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಡ್ದಮ್ ವಹಿಸಿದ್ದರು. ಹಿರಿಯಡ್ಕದ ನಾರಾಯಣಗುರು ಸಭಾಂಗಣದಲ್ಲಿ ಕಾರ್ಯಕ್ರಮವು ಸರಳ ರೀತಿಯಲ್ಲಿ ಜರುಗಿತು. ಸದಸ್ಯರಾದ ವಸಂತ್ ಶೆಟ್ಟಿ ಪ್ರಸಕ್ತ […]

ಮಂಜುನಾಥ ಭಂಡಾರಿ ಹೇಳಿಕೆ ದೆವ್ವದ ಬಾಯಲ್ಲಿ ಭಗವದ್ಗೀತೆ : ಕುಯಿಲಾಡಿ ಸುರೇಶ್ ನಾಯಕ್

  ಉಡುಪಿ: ಸ್ವಾತಂತ್ರ್ಯಾ ನಂತರ ಸುದೀರ್ಘ ಅವಧಿಗೆ ದುರಾಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷವು ಬ್ರಹ್ಮಾಂಡ ಭ್ರಷ್ಟಾಚಾರಗೈದಿರುವುದನ್ನು ಮರೆತು ಕಾಂಗ್ರೆಸ್ ಮುಖಂಡ ಮತ್ತು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು ಬಿಜೆಪಿ ಬಗ್ಗೆ ಲಘುವಾಗಿ ಮಾತನಾಡಿರುವುದು ದೆವ್ವದ ಬಾಯಲ್ಲಿ ಭಗವದ್ಗೀತೆ ಎಂಬಂತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಉಡುಪಿ ಕೃಷ್ಣ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

  ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಉಡುಪಿಯ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯ ಮತ್ತು ಬಳಗದವರಿಂದ “ಕರ್ನಾಟಕ ಶಾಸ್ತ್ರೀಯ ಸಂಗೀತ” ಕಾರ್ಯಕ್ರಮವು ಉಡುಪಿಯ ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ನಡೆಯಿತು.

ಉಡುಪಿ: ಬಾವಿಗೆ ಹಾರಿ ಮೇಸ್ತ್ರಿ ಆತ್ಮಹತ್ಯೆ

ಉಡುಪಿ: ಗಾರೆ ಮೇಸ್ತ್ರಿಯೊಬ್ಬರು ನೆರೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ 76 ಬಡಗುಬೆಟ್ಟು ಗ್ರಾಮದ ಚಂದು ಮೈದಾನದ ಬಳಿ ಶನಿವಾರ ನಡೆದಿದೆ. ಬಡಗುಬೆಟ್ಟು ಗ್ರಾಮದ ನಿವಾಸಿ 47 ವರ್ಷದ ಸದಾನಂದ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಮೇಸ್ತ್ರಿ. ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಮನನೊಂದು ಶನಿವಾರ ಬೆಳಿಗ್ಗೆ 11.15 ಸುಮಾರಿಗೆ ನೆರೆಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಗ್ನಿಶಾಮಕ ದಳದವರ ಸಹಕಾರದಿಂದ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು […]