ಗೋಹತ್ಯೆ ನಿಷೇಧಿಸಲು ಮೋದಿ ಸರಕಾರ ಸೂಕ್ತ ಕಾನೂನು ರೂಪಿಸಬೇಕು: ಪೇಜಾವರ ಶ್ರೀ

ಉಡುಪಿ: ಗೋಹತ್ಯೆ, ಗೋಮಾಂಸದ ಭಕ್ಷಣೆ ಹೇಯ ಕೃತ್ಯ. ಮಾನವೀಯ ನೆಲೆಯಲ್ಲಿ ಗೋವಿನ‌ ರಕ್ಷಣೆಯಾಗಬೇಕು. ಕೇಂದ್ರದಲ್ಲಿ ಬಿಜೆಪಿ ಬಹುಮತದಿಂದ ಆಯ್ಕೆಯಾಗಿದೆ. ಹೀಗಾಗಿ ನರೇಂದ್ರ ಮೋದಿ ನೇತೃತ್ವದ ಸರಕಾರ ಗೋವಿನ ‌ರಕ್ಷಣೆಗೆ ಸೂಕ್ತ ಕಾನೂನು ರೂಪಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಾನುವಾರ ದೇಸಿ ಗೋ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ‌ ಪಶು ಸಂಪತ್ತು ಬೆಳೆಯಬೇಕು. ಅಮೃತ ಕೊಡುವ ಗೋವುಗಳ ಬಗ್ಗೆ ಕಾಳಜಿ ವಹಿಸಬೇಕಿದೆ. ಗೋವುಗಳನ್ನು ಉಳಿಸುವ ಕಾಳಜಿ ಯಾರು […]

ಮೇ.31-ಜೂ.10: ಉಡುಪಿ ಶ್ರೀಕೃಷ್ಣ ಮಠದ ಸುವರ್ಣಗೋಪುರ ಸಮರ್ಪಣೋತ್ಸವ,  ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಪಲಿಮಾರು ಶ್ರೀಗಳ ಹೇಳಿಕೆ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಸುವರ್ಣಗೋಪುರ ಸಮರ್ಪಣೋತ್ಸವ ಶಿಖರ ಪ್ರತಿಷ್ಠಾ, ಬ್ರಹ್ಮಕಲಶಾಭಿಷೇಕ ಮಹೋತ್ಸವದ ಕಾರ್ಯಕ್ರಮಗಳು ಮೇ.31ರಿಂದ ಮೊದಲ್ಗೊಂಡು ಜೂನ್.10ರ ವರೆಗೆ ನಡೆಯಲಿದೆ ಎಂದು ಪಲಿಮಾರು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜೂನ್.1ರಂದು ಸಂಜೆ 4 ಗಂಟೆಗೆ  ಜೋಡುಕಟ್ಟೆಯಿಂದ ಉಡುಪಿ ಶ್ರೀಕೃಷ್ಣಮಠದ ವರೆಗೆ ಬೃಹತ್ ಶೋಭಯಾತ್ರೆ ನಡೆಯಲಿದೆ. ಒಟ್ಟು 100ಕೆ.ಜಿಗಿಂತಲೂ ಅಧಿಕ ಸುವರ್ಣ, 800 ಕೆಜಿ ಬೆಳ್ಳಿ, 300 ಕೆಜಿ ತಾಮ್ರದ ಫಲಕಗಳಿಂದ ಕೂಡಿದ ಗೋಪುರವನ್ನು ಮಧ್ವ ಪೀಠಾಧಿಪತಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಸಮರ್ಪಿಸಲಾಗುತ್ತದೆ […]

ಉಡುಪಿಯಲ್ಲಿ‌ ಬಿಜೆಪಿ ಸಂಭ್ರಮಾಚರಣೆ

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ‌ ಕರಂದ್ಲಾಜೆ ಜಯಗಳಿಸಿದ ಸುದ್ದಿ ತಿಳಿಯುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಸುತ್ತ ಜಮಾಯಿಸಿದ್ದ ಪಕ್ಷದ ಸಾವಿರಾರು ಕಾರ್ಯಕರ್ತರು ಪರಸ್ಪರ ಹೂವು, ಗುಲಾಲು ಎರಚಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನಗರದ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಜಮಯಾಯಿಸಿದ್ದ ಕಾರ್ಯಕರ್ತರು ಪಕ್ಷದ ಧ್ವಜಗಳನ್ನು ಹಿಡಿದು ಪ್ರಧಾನಿ‌ ಮೋದಿ ಹಾಗೂ ಶೋಭಾ ಕರಂದ್ಲಾಜೆ ಪರ ಜೈಘೋಷಗಳನ್ನು ಹಾಕಿದರು. ಶೋಭಾ ಅವರೂ ಗೆಲುವಿನ ಖುಷಿಯಲ್ಲಿ ಕುಣಿದರು. ಬಳಿಕ ಶೋಭಾ ಕರಂದ್ಲಾಜೆ ಅವರು ತೆರೆದ ವಾಹನದಲ್ಲಿ ಬ್ರಹ್ಮಗಿರಿ […]

ಉಡುಪಿಯ ಸುಜ್ಞಾನ ಶಿಕ್ಷಣ‌ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಶಿಕ್ಷಣ

ಉಡುಪಿ: ಉಡುಪಿ ಪುತ್ತಿಗೆ ಮಠದ ಬಳಿ ಇರುವ ಸುಜ್ಞಾನ ಶಿಕ್ಷಣ ಸಂಸ್ಥೆಯು ಕಳೆದ 7 ವರ್ಷದಿಂದ ಸತತವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಜೊತೆ ಜೊತೆಗೆ ಸ್ಪರ್ಧಾತ್ಮ ಶಿಕ್ಷಣವನ್ನು ನೀಡುತ್ತಿದೆ. ಈ ಶಿಕ್ಷಣ ಸಂಸ್ಥೆಯು ಪ್ರಥಮ ಪಿಯುಸಿ ಫೇಲ್ ಆದ ವಿದ್ಯಾರ್ಥಿ ಗಳಿಗೆ ನೇರವಾಗಿ ದ್ವೀತಿಯ ಪಿಯುಸಿ ಪರೀಕ್ಷೆಯನ್ನು ಬರೆಯುವ ಅವಕಾಶವನ್ನು ಕಲ್ಪಿಸಿದೆ. ಇಲ್ಲಿ ರೆಗ್ಯುಲರ್ ಕ್ಲಾಸಸ್, ಎಕ್ಸ್ಪರ್ಟ್  ಲೆಕ್ಚರ್ಸ್, ಡಿಸಿಪ್ಲಿನ್, ರಿಸಲ್ಟ್ ಓರಿಯಂಟೆಡ್ ಶಿಕ್ಷಣವನ್ನು  ನೀಡಲಾಗುವುದು. ಹಾಗೂ 8ನೇ, 9ನೇ, 10ನೇ, ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ […]

ಹೆಚ್1ಎನ್1: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಾರ್ವಜನಿರಿಗೆ ಸೂಚನೆ

ಉಡುಪಿ, ಮೇ 18: ಹೆಚ್1ಎನ್1 ಕಾಯಿಲೆಯು ಹೆಚ್1ಎನ್1 ಎಂಬ ಇನ್‍ಫ್ಲುಯೆಂಜಾ ಜಾತಿಗೆ ಸೇರಿದ ವೈರಾಣುವಿನಿಂದ ಬರುವಂತಹ ಕಾಯಿಲೆಯಾಗಿದೆ. ಇದು ಹೆಚ್ಚಿನ ಜನರಲ್ಲಿ ಮಾಮೂಲಿ ಶೀತ, ಕೆಮ್ಮು ರೂಪದಲ್ಲಿ ಬಂದು ಹೋಗುತ್ತದೆ. ಈ ಕಾಯಿಲೆಯಿಂದ ಸಾವಿರದಲ್ಲಿ ಒಬ್ಬರು ಅಥವಾ ಇಬ್ಬರು ಮಾತ್ರ ಸಾವಿಗೀಡಾಗಬಹುದು. ಈ ರೋಗವಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅವನ ಬಾಯಿ, ಮೂಗಿನಿಂದ ಲಕ್ಷಾಂತರ ರೋಗಾಣುಗಳು 5 ರಿಂದ 10 ಫೀಟ್ ತನಕ ಗಾಳಿಯಲ್ಲಿ ಹರಡುತ್ತದೆ. ಅವನ ಹತ್ತಿರ ಇರುವ ಆರೋಗ್ಯವಂತರ ಮೂಗಿಗೆ, ಬಾಯಿಗೆ ಪ್ರವೇಶಿಸಿದಾಗ ರೋಗ […]