ಉಡುಪಿ: ಇಂದ್ರಾಳಿಯಲ್ಲಿ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ

ಉಡುಪಿ: ನಗರದ ಇಂದ್ರಾಳಿ ರೈಲ್ಪೆ ನಿಲ್ದಾಣ ಸಮೀಪದ ಪೆಟ್ರೋಲ್ ಬಂಕ್ ಪಕ್ಕದ ಕಟ್ಟಡಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ಭಾನುವಾರ ರಾತ್ರಿ ಸಂಭವಿಸಿದ್ದು, ಅವಘಡದಿಂದ ಕಟ್ಟಡದ ಕೆಳ ಮಹಡಿಯಲ್ಲಿದ್ದ ಬೈಕ್ ಶೋರೂಂ ಸುಟ್ಟು ಹೋಗಿದೆ. ಕಟ್ಟಡದಲ್ಲಿ ದಂತ ಚಿಕಿತ್ಸಾ ಆಸ್ಪತ್ರೆ, ವಾಣಿಜ್ಯ ಮಳಿಗೆಗಳಿವೆ. ಘಟನೆಯಿಂದ ಅಪಾರ ಹಾನಿ ಸಂಭವಿಸಿದೆ. ಸ್ಥಳಕ್ಕೆ ಉಡುಪಿಯಿಂದ ಎರಡು ಅಗ್ನಿಶಾಮಕ ದಳ ವಾಹನ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ತಿಳಿದು ಬಂದಿದೆ.
ಉಡುಪಿ: ಬಾವಿಯಲ್ಲಿ ಶವ ಪತ್ತೆ

ಉಡುಪಿ, ಜೂ.18: ಬನ್ನಂಜೆಯ ಗೋವಿಂದ ಆಚಾರ್ಯ ಮಾರ್ಗದ ಗರಡಿ ಸನಿಹದ ಖಾಸಗಿಯವರ ಸ್ಥಳದ ಬಾವಿಯಲ್ಲಿ ವೃದ್ಧೆಯೊರ್ವರ ಶವ ಪತ್ತೆಯಾದ ಘಟನೆ ಮಂಗಳವಾರ ನಡೆದಿದೆ. ವೃದ್ಧೆಯು ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ಶಂಕಿಸಲಾಗಿದೆ. ಪ್ರಕರಣ ನಗರಣ ಠಾಣೆಯಲ್ಲಿ ದಾಖಲಾಗಿದ್ದು, ಹೆಚ್ಚಿನ ವಿವರಗಳು ತನಿಖೆಯಿಂದ ತಿಳಿದು ಬರಬೇಕಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ಮೇಲೆತ್ತಿ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಶವ ಸಾಗಿಸಲು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಇಲಾಖೆಗೆ ಸಹಕರಿಸಿದ್ದಾರೆ. ಮೃತ ವೃದ್ಧೆ ಬಾಗಲಕೋಟೆ ಜಿಲ್ಲೆ ಮೂಲದ ವಲಸೆ ಕಾರ್ಮಿಕೆ ನೀಲಮ್ಮ(68) […]
ಐಎಂಎ ವಂಚನೆ ಪ್ರಕರಣ: ಉಡುಪಿಯಲ್ಲೂ ಪ್ರಕರಣ ದಾಖಲು
ಉಡುಪಿ: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲೂ ಮೊದಲ ಪ್ರಕರಣ ದಾಖಲಾಗಿದೆ. ಕೆಮ್ಮಣ್ಣು ತೋನ್ಸೆಯ ಇಸ್ಮಾಯೀಲ್ ಎಂಬವರ ಪತ್ನಿ ಎಸ್.ಕೆ.ನಾಹಿದಾ (30) ಎಂಬವರು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರಿನ ಐಎಂಎ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಅಸಲು ಮೊತ್ತದ ಜತೆ ತಿಂಗಳಿಗೆ 3.1% ಬಡ್ಡಿ/ಲಾಭಾಂಶ ನೀಡುವುದಾಗಿ ಸಂಬಂಧಿಕರಿಂದ ತಿಳಿದು 2018ರ ಡಿ.21ರಂದು ಪಾಲು ಬಂಡವಾಳದ(ಶೇರ್) ಮೊತ್ತ 1,000 ರೂ. ಹಾಗೂ ಡೆಪೋಸಿಟ್ ಆಗಿ 30,000 ರೂ. ಮತ್ತು […]
ಉಡುಪಿಗೆ ಕಂದಾಯ ಸಚಿವ ಆರ್ ವಿ ದೇಶ್ ಪಾಂಡೆ ಭೇಟಿ, ವಿವಿಧ ಕಾಮಗಾರಿ ವೀಕ್ಷಣೆ

ಉಡುಪಿ: ಕರ್ನಾಟಕ ಸರಕಾರದ ಕಂದಾಯ ಸಚಿವ ಆರ್.ವಿ. ದೇಶ್ ಪಾಂಡೆ ಅವರು ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಜಿಲ್ಲೆಯ ಹೆಜಮಾಡಿ, ಕಾಪು ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು. ಅಲ್ಲದೇ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಮೊದಲ ಭಾರಿಗೆ ಭೇಟಿ ಅವರನ್ನು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಸ್ವಾಗತಿಸಿದರು.
ಸಿಆರ್ ಝಡ್ ಮರಳು ದಿಬ್ಬ ತೆರವು ನಿಷೇಧ

ಉಡುಪಿ, ಜೂನ್ 14: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ 2018-19 ನೇ ಸಾಲಿನಲ್ಲಿ ಒಂದು ವರ್ಷದ ಅವಧಿಗೆ 45 ಜನ ಸ್ಥಳೀಯ ಸಾಂಪ್ರದಾಯಿಕ ಮರಳು ಪರವಾನಗೆದಾರರಿಗೆ ಪರವಾನಿಗೆ ನೀಡಿ ಮರಳು ದಿಬ್ಬ ತೆರವುಗೊಳಿಸಲು ಅವಕಾಶ ಕಲ್ಪಿಸಲಾಗಿದ್ದು, ಅವರಿಗೆ ನಿಗಧಿಪಡಿಸಿರುವ ಪ್ರಮಾಣವು ಮುಗಿದಿರುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್ 1 ರಿಂದ ಜುಲೈ 31 ರ ವರೆಗೆ ಮೀನುಗಾರಿಕೆ ನಿಷೇಧವಿರುವುದರಿಂದ ಈ ಅವಧಿಯಲ್ಲಿ ಸಿಆರ್ ಝಡ್ ಪ್ರದೇಶದಲ್ಲಿ ಮರಳು ದಿಬ್ಬ ತೆರವುಗೊಳಿಸುವುದು ನಿಷೇಧವಿರುತ್ತದೆ. ಆದ್ದರಿಂದ ಅವಧಿಯಲ್ಲಿ ಯಾವುದೇ ಮರಳು ದಿಬ್ಬ […]