ಉಡುಪಿ: ನಾಗರಾಜನ ಸಂಚಾರಕ್ಕೆ ಝಿರೋ ಟ್ರಾಫಿಕ್.!

ಉಡುಪಿ: ನಗರದ ಕಲ್ಸಂಕ ಜಂಕ್ಷನ್ ನಲ್ಲಿ ಇಂದು ನಾಗರಹಾವೊಂದು ಪ್ರತ್ಯಕ್ಷಗೊಂಡಿದ್ದು, ಟ್ರಾಫಿಕ್ ಪೊಲೀಸರು ವಾಹನಗಳನ್ನು ನಿಲ್ಲಿಸಿ ನಾಗರಾಜನಿಗೆ ರಸ್ತೆ ದಾಟಲು ಅನುಕೂಲ ಮಾಡಿಕೊಟ್ಟರು. ಸದಾ ವಾಹನ ಸಂಚಾರದ ದಟ್ಟಣೆಯಿಂದ ಕೂಡಿರುವ ಕಲ್ಸಂಕ ಜಂಕ್ಷನ್‌ನಲ್ಲಿ ನಾಗರಹಾವು ಕಾಣಿಸಿಕೊಂಡಿದ್ದರಿಂದ ವಾಹನ ಸವಾರರು ಹಾಗೂ ಟ್ರಾಫಿಕ್ ಪೊಲೀಸರು ಕೆಲಕಾಲ ತಬ್ಬಿಬ್ಬಾದರು. ನಾಗರಹಾವು ಗುಂಡಿಬೈಲು ಕಡೆಯಿಂದ ಕೃಷ್ಣ ಮಠಕ್ಕೆ ಹೋಗುವ ರಸ್ತೆಯ ಕಡೆಗೆ ಸಂಚರಿಸುತ್ತಿದ್ದು, ವಾಹನಗಳ ದಟ್ಟಣೆಯಿಂದ ಹಾವು ಕೂಡ ಕೆಲ ಕ್ಷಣ ಗಲಿಬಿಲಿಗೊಂಡಿತು. ಇದನ್ನು ಗಮನಿಸಿದ ಸಂಚಾರ ಪೊಲೀಸ್ ಸಿಬ್ಬಂದಿ 4 […]