ಉಡುಪಿ ಯಕ್ಷಗಾನ ಕೇಂದ್ರ: ಫೆ. 20ರಿಂದ ಉಚಿತ ಯಕ್ಷಗಾನ ಕಮ್ಮಟ
ಉಡುಪಿ: ಶಿವಪ್ರಭಾ ಯಕ್ಷಗಾನ ಕೇಂದ್ರ ಇಂದ್ರಾಳಿ-ಉಡುಪಿ ಸಂಸ್ಥೆಯು 50 ಸಾರ್ಥಕ ವರ್ಷಗಳನ್ನು ಪೂರೈಸಿದೆ. ಈ ಸುಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಉದ್ದೇಶದಿಂದ ರಾಷ್ಟ್ರಮಟ್ಟದ ರಂಗಭೂಮಿ ಕಲಾವಿದರು ಮತ್ತು ರಂಗಕರ್ಮಿಗಳಿಗೆ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ನೇತೃತ್ವದಲ್ಲಿ ಉಚಿತ ಯಕ್ಷಗಾನ ಕಮ್ಮಟವನ್ನು ಆಯೋಜಿಸಲು ಸಂಸ್ಥೆ ತೀರ್ಮಾನಿಸಿದೆ. ಉಡುಪಿ ಯಕ್ಷಗಾನ ಕೇಂದ್ರ ಉಚಿತ ಶಿಬಿರವನ್ನು ಕೈಗೊಳ್ಳುತ್ತದೆ ಎಂಬ ಮಾಹಿತಿ ಪಡೆದ ದೇಶದ ವಿವಿಧ ರಾಜ್ಯಗಳ ರಂಗಕರ್ಮಿಗಳು 300 ಕ್ಕೂ ಹೆಚ್ಚು ಅರ್ಜಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಈ ಪೈಕಿ ಡೆಲ್ಲಿ, ಮಹಾರಾಷ್ಟ್ರ, ಜೈಪುರ, ಉತ್ತರಪ್ರದೇಶ […]