ಉಡುಪಿ: ಬಡಗುತಿಟ್ಟು ಯಕ್ಷಗಾನ ಕಲಾವಿದ ಸತೀಶ ಹೆಗಡೆ ನಿಧನ
ಉಡುಪಿ: ಬಡಗುತಿಟ್ಟು ಯಕ್ಷಗಾನ ಕಲಾವಿದ ಸತೀಶ ಹೆಗಡೆ (56) ಅವರು ಬುಧವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಸತೀಶ ಹೆಗಡೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಸಮೀಪ ಹುಂಚದ ನಿವಾಸಿ. ಇವರು ನಾಗರಕೋಡಿಗೆ, ಕಮಲಶಿಲೆ, ಸಿಗಂಧೂರು, ಹಾಲಾಡಿ, ಗುತ್ಯಮ್ಮ, ಸೀತೂರು ಮೇಳಗಳಲ್ಲಿ ಮೂರುವರೆ ದಶಕಗಳ ಕಲಾ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.