ಪುಟಾಣಿ ಮಕ್ಕಳೊಂದಿಗೆ ನಿಸರ್ಗದ ಮಡಿಲಲ್ಲಿ ವಿಶ್ವ ಪರಿಸರ ದಿನಾಚರಣೆ

ಉಡುಪಿ: ನಿಸರ್ಗದ ಮಡಿಲಲ್ಲಿ ಸಸಿಗಳನ್ನು ನೆಟ್ಟ ಪುಟಾಣಿಗಳು. ಬಳಿಕ ಹಚ್ಚ ಹಸುರಿನ ಹೊದಿಕೆಯಲ್ಲಿ ಕುಳಿತು ಹಕ್ಕಿಗಳ ಕಲರವದ ನಡುವೆ ಹಿರಿಯ ಪರಿಸರತಜ್ಞರ ಮಾತು.  ಉಡುಪಿ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನದ ವಠಾರದಲ್ಲಿ ಭಾನುವಾರ ಆರ್ಗನೈಸೇಷನ್ ಫಾರ್ ರೂರಲ್ ಡೆವಲಪ್ಮೆಂಟ್ ಆಂಡ್ ರಿಸರ್ಚ್, ಚೈಲ್ಡ್ ಲೈನ್ 1098 ಉಡುಪಿ, ಇಂಟರಾಕ್ಟ್ ಕ್ಲಬ್ ಮತ್ತು ಶ್ರೀ ಕೃಷ್ಣ ಬಾಲನಿಕೇತನ ಜಂಟಿ ಆಶ್ರಯದಲ್ಲಿ ವಿಶಿಷ್ಟವಾಗಿ ವಿಶ್ವ ಪರಿಸರ ದಿನಾಚರಣೆ ನಡೆಯಿತು. ಪರಿಸರತಜ್ಞ ಮತ್ತು ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಎನ್.ಎ. […]

ಪರಿಸರ ದಿನಾಚರಣೆ: ಇನಾಯತ್ ಆರ್ಟ್ ಗ್ಯಾಲರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರ ಕಲಾ ಸ್ಪರ್ಧೆ

ಉಡುಪಿ: ಶನಿವಾರ ಇನಾಯತ್ ಆರ್ಟ್ ಗ್ಯಾಲರಿ, ಜಯಂಟ್ಸ್ ಗ್ರೂಪ್ ಮತ್ತು ಮಣ್ಣು ಉಳಿಸಿ ಅಭಿಯಾನ ತಂಡ ಇವರ ಜಂಟಿ ಆಶ್ರಯದಲ್ಲಿ, ಪರಿಸರ ದಿನದ ಅಂಗವಾಗಿ ಶಾಲಾ ಮಕ್ಕಳಿಗೆ ನಾಲ್ಕು ವಿಭಾಗದಲ್ಲಿ ‘ಮಣ್ಣು ಉಳಿಸಿ’ ಇದರ ಕುರಿತು ಜಿಲ್ಲಾ ಮಟ್ಟದ ಚಿತ್ರ ಕಲಾ ಸ್ಪರ್ಧೆ ಕುಂಜಿಬೆಟ್ಟಿನ ಇನಾಯತ್ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು. ಶಾಸಕ ರಘುಪತಿ ಭಟ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮುಂದಿನ ದಿನಗಳಲ್ಲಿ ಮಣ್ಣು ಉಳಿಸಿ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳದ್ದು ಎಂದರು. ಪರಿಸರ […]

ಜಿಲ್ಲಾ ನಾಗರಿಕ ಸಮಿತಿಯಿಂದ ವಿಶ್ವ ಪರಿಸರ ದಿನಾಚರಣೆ

ಉಡುಪಿ, ಜೂ.5: ಜಿಲ್ಲಾ ನಾಗರಿಕ ಸಮಿತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಾಲು ಗಿಡಗಳನ್ನು ನಡೆಯುವ ಕಾರ್ಯಕ್ರಮ ಶಾರದನಗರದ ಬೈಲಕೆರೆ ವಾರ್ಡಿನಲ್ಲಿ ನಡೆಯಿತು. ದೇಶದಲ್ಲಿ ನಾಗರಿಕ ಸಮಾಜ, ಹಾಗೂ ಸಕಲ ಜೀವರಾಶಿಗಳು ಸ್ವಸ್ಥ ಜೀವನ ಸಾಗಿಸಲು, 33ಶೇ. ಅರಣ್ಯ ಭೂಮಿಯ ಹೆಚ್ಚು ಅವಶ್ಯಕತೆ ಇದೆ. ಜನಸಂಖ್ಯೆ ಹೆಚ್ಚಳ, ಅಭಿವೃದ್ಧಿ ಕಾರ್ಯಗಳು, ಅರಣ್ಯನಾಶ, ಪ್ರಕೃತಿಯ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಹೀಗೆ ಮೊದಲಾದ ಕಾರಣಗಳಿಂದ ಇವಾಗ ದೇಶದಲ್ಲಿ 22% ಶೇ. ಅರಣ್ಯ ಭೂಮಿ ಉಳಿದುಕೊಂಡಿದೆ. ಪ್ರತಿಯೊಬ್ಬ ನಾಗರಿಕನಿಗೆ ಪರಿಸರ […]