ಉಡುಪಿ: 20ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆ
ಉಡುಪಿ: ತುಳು ರಂಗಭೂಮಿಯ ಬೆಳವಣಿಗೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಮಹನೀಯರಲ್ಲಿ ದಿ. ಕೆಮ್ಮೂರು ದೊಡ್ಡಣ್ಣ ಶೆಟ್ಟಿಯವರು ಅಗ್ರಗಣ್ಯರು, ಅವರ ನೆನಪಿನಲ್ಲಿ, ತುಳು ರಂಗಭೂಮಿಯನ್ನು ಜೀವಂತವಾಗಿರಿಸುವ, ಸೃಜನಶೀಲ ಆಧುನಿಕ ರಂಗಪ್ರಯೋಗಗಳಿಗೆ ಅವಕಾಶ ಮಾಡಿಕೊಡುವ ಮತ್ತು ತುಳು ರಂಗಭೂಮಿಯು ಅನ್ಯಭಾಷಾ ರಂಗಭೂಮಿಗಳಿಗೆ ಸರಿಸಮನಾಗಿ ಬೆಳೆಸುವ ಎಂಬ ಉದ್ದೇಶದಿಂದ ಉಡುಪಿ ತುಳುಕೂಟವು ‘ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪಧೆಯನ್ನು 20ನೇ ವರ್ಷಗಳಿಂದ ನಡೆಸುತ್ತಿದೆ. ಈ ಬಾರಿ 2022ರ ಜನವರಿ ತಿಂಗಳ 23ರಿಂದ ಕೆಮ್ತೂರು ತುಳು ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. […]