ಉಡುಪಿ: ಅಪಘಾತದಲ್ಲಿ ಗಾಯಗೊಂಡಿದ್ದ ಸಾರಿಗೆ ಉದ್ಯಮಿ ಮೃತ್ಯು

ಉಡುಪಿ: ಕುರ್ಕಾಲು-ಸುಭಾಸ್‌ ನಗರ ಬಳಿ ಆಟೊ ರಿಕ್ಷಾ ಮತ್ತು‌ ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ‌ ಗಂಭೀರ ಗಾಯಗೊಂಡಿದ್ದ ಪಾಂಗಾಳ ಜೆ. ಎನ್. ಮೋಟಾರ್ಸ್ ನ ಮಾಲೀಕ ಹರಿದಾಸ್ ಭಟ್ (65) ಚಿಕಿತ್ಸೆ ಫಲಕಾರಿಯಾಗದೇ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಶನಿವಾರ ಬೆಳಿಗ್ಗೆ ಕುರ್ಕಾಲು ಸುಭಾಸ್ ನಗರ ಸಮೀಪದ ದ್ವಾರದ ಬಳಿ ಬೈಕ್‌ ಹಾಗೂ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಹರಿದಾಸ್ ಭಟ್ ಅವರಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ […]