ಉಡುಪಿ: ಜಿ.ಟಿ & ಟಿ.ಸಿ ನಲ್ಲಿ ಟೊಯೊಟಾ ಪ್ರಾಯೋಜಿತ ತಾಂತ್ರಿಕ ತರಬೇತಿ–ಅರ್ಜಿ ಆಹ್ವಾನ

ಉಡುಪಿ: ಉಡುಪಿಯ ಉಪ್ಪೂರು ಕೊಳಲಗಿರಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ, ಟಯೊಟಾ ಕಂಪನಿಯು ಜಿಟಿಟಿಸಿಯಲ್ಲಿನ ವಿದ್ಯಾರ್ಥಿಗಳಿಗೆ ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿದ ಅಸೆಂಬ್ಲಿ ಫಿಟ್ಟರ್ ಮತ್ತು ವೆಲ್ಡರ್ ಟ್ರೇಡ್‌ಗಳಲ್ಲಿ ವೃತ್ತಿಪರ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. 3 ವರ್ಷ ಅವಧಿಯ ತರಬೇತಿ ಇದಾಗಿದ್ದು, 1 ವರ್ಷ ಜಿಟಿಟಿಸಿ ಉಡುಪಿಯಲ್ಲಿ ಮತ್ತು ಎರಡು ವರ್ಷ ಬೆಂಗಳೂರಿನ ಪ್ರತಿಷ್ಟಿತ ಕೈಗಾರಿಕಾ ಸಂಸ್ಥೆಯಲ್ಲಿ ತರಬೇತಿ ಇರುತ್ತದೆ. ಈ ಎರಡು ವರ್ಷಗಳ ಅವಧಿಯಲ್ಲಿ ಮಾಸಿಕ ಸ್ಟ್ರೈಫಂಡ್, ಸಾರಿಗೆ ಮತ್ತು ಕ್ಯಾಂಟೀನ್ ಸೌಲಭ್ಯ ನೀಡಲಾಗುತ್ತದೆ. […]