ಉಡುಪಿ: ಮುಳ್ಳು ಹಂದಿ ಸಂಚಾರ; ಕಾರ್ಯಾಚರಣೆ
ಉಡುಪಿ: ಇಲ್ಲಿನ ಚಂದುಮೈದಾನದ ಬಳಿಯ ಜನವಸತಿ ಪರಿಸರದ ರಸ್ತೆಗಳಲ್ಲಿ ರಾತ್ರಿಯ ಸಮಯ ಮುಳ್ಳು ಹಂದಿಗಳು ಸಂಚರಿಸುತ್ತಿದ್ದು, ಇದರಿಂದ ರಾತ್ರಿಯ ಸಮಯದಲ್ಲಿ ಸಾರ್ವಜನಿಕರು ರಸ್ತೆಗಳಲ್ಲಿ ಸಂಚರಿಸಲು ಆತಂಕ ಪಡುವಂತಾಗಿದೆ. ಈ ಬಗ್ಗೆ ಪತ್ರಕರ್ತ ಸಂತೋಷ್ ಸರಳಬೆಟ್ಟು ಅವರು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಹಾಯವಾಣಿಗೆ ಮಾಹಿತಿ ನೀಡಿದ್ದರು. ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮುಳ್ಳು ಹಂದಿಯ ಸಂಚರಿಸುವುದು ಕಂಡುಬಂದಿದೆ. ಸಂಚಾರ ಸ್ಥಳ ಗುರುತಿಸಿ, ಅರಣ್ಯ ಇಲಾಖೆ ಮತ್ತು ನಾಗರಿಕ ಸಮಿತಿಯ ಕಾರ್ಯಕರ್ತರು ಮುಳ್ಳು ಹಂದಿಯ ವಶಕ್ಕೆ ಪಡೆಯಲು, […]