ಉಡುಪಿ: ಕೆಜಿಎಫ್-2 ಯಶಸ್ವಿ ಪ್ರದರ್ಶನದಿಂದ ಚಿತ್ರಮಂದಿರ ಚೇತರಿಕೆ

ಉಡುಪಿ: ಕೋವಿಡ್ ನಿಂದಾಗಿ ಎರಡು ವರ್ಷ ಸಾಕಷ್ಟು ನಷ್ಟಕ್ಕೆ ಸಿಲುಕಿದ್ದ ಚಿತ್ರಮಂದಿರಗಳು, ಕೆಜಿಎಫ್-2 ಸಿನಿಮಾದ ಯಶಸ್ವಿ ಪ್ರದರ್ಶನದಿಂದ ಮರುಚೇತರಿಕೆ ಕಂಡಿದೆ ಎಂದು ಅಲಂಕಾರ್ ಚಿತ್ರಮಂದಿರದ ವ್ಯವಸ್ಥಾಪಕ ಜಗದೀಶ್ ಕುಡ್ವ ತಿಳಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಲ್ಟಿಫ್ಲೆಕ್ಸ್ ಅಬ್ಬರದ ನಡುವೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸಂಕಷ್ಟಕ್ಕೆ ಸಿಲುಕಿದ್ದವು. ಆದಾದ ಬಳಿಕ ಕೋವಿಡ್ ಲಾಕ್‌ಡೌನ್ ನಿಂದ ಚಿತ್ರಮಂದಿರದ ವ್ಯವಹಾರಕ್ಕೆ ಸಾಕಷ್ಟು ಹೊಡೆತ ಬಿದ್ದಿತ್ತು. ಕೋವಿಡ್ ಲಾಕ್‌ಡೌನ್ ಮುಗಿದ ಬಳಿಕ ಚಿತ್ರಮಂದಿರಗಳು ತೆರೆದರೂ ಜನರು ಮಾತ್ರ ಚಿತ್ರಮಂದಿರದತ್ತ ಬರುತ್ತಿರಲಿಲ್ಲ. ಇದರ […]