ಉಡುಪಿ: ಮಾನಸಿಕ ಅಸ್ವಸ್ಥನಿಗೆ ಆಶ್ರಯ ಒದಗಿಸಿದ ‘ಹೊಸಬೆಳಕು’
ಉಡುಪಿ: ಹಲವು ತಿಂಗಳಿನಿಂದ ಮಣಿಪಾಲ ಪರಿಸರದಲ್ಲಿ ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ, ಅಪರಿಚಿತ ಮಾನಸಿಕ ಅಸ್ವಸ್ಥನನ್ನು ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಹಕಾರದಿಂದ ರಕ್ಷಿಸಿ, ದೊಡ್ಡಣಗುಡ್ಠೆ ಡಾ.ಎ.ವಿ ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿ ಮಾನವಿಯತೆ ಮೆರೆದ ಘಟನೆಯು ಕಳೆದ ನ 9ರಂದು ನಡೆದಿತ್ತು. ಇದೀಗ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮಣಿಪಾಲ ಹೊಸಬೆಳಕು ಆಶ್ರಮದಲ್ಲಿ ನೆಲೆ ಕಲ್ಪಿಸಲಾಗಿದೆ. ರಕ್ಷಣಾ ಕಾರ್ಯಚರಣೆಯಲ್ಲಿ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ […]