ಉಡುಪಿ: ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

ಉಡುಪಿ: ಇನ್ಫೋಸಿಸ್ ಪ್ರಾಯೋಜಿತ ಧ್ವನಿ ಫೌಂಡೇಶನ್ ನೀಡಿದ 51 ಟ್ಯಾಬ್‍ಗಳ ವಿತರಣೆ ಕಾರ್ಯಕ್ರಮ ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ನಡೆಯಿತು. ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾಪೋಷಕ್ ಫಲಾನುಭವಿ 51 ವಿದ್ಯಾರ್ಥಿಗಳಿಗೆ ದಾನಿ ಯು. ವಿಶ್ವನಾಥ ಶೆಣೈ ಟ್ಯಾಬ್ ಹಸ್ತಾಂತರಿಸಿದರು. ಸಂಸ್ಥೆ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸಹಾಯಧನ ಮತ್ತು ಮಾರ್ಗದರ್ಶನ ದೊಡ್ಡ ಕೆಲಸ ಎಂದು ಹೇಳಿದರು. ಪ್ರೊ. ಕೆ. ಸದಾಶಿವ ರಾವ್ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. […]