ಉಡುಪಿ ಕೃಷ್ಣಮಠದಲ್ಲಿ ಸೆ. 10, 11ರಂದು ಕೃಷ್ಣಜನ್ಮಾಷ್ಟಮಿ: ಕೊರೊನಾ ಹಿನ್ನೆಲೆ ಸಾರ್ವಜನಿಕವಾಗಿ ಆಚರಣೆ ಇಲ್ಲ

ಉಡುಪಿ: ಇಲ್ಲಿನ ಶ್ರೀಕೃಷ್ಣಮಠದಲ್ಲಿ ಸೌರಮಾನ ಪಂಚಾಂಗದ ಪ್ರಕಾರ ಕೃಷ್ಣಜನ್ಮಾಷ್ಟಮಿ ಆಚರಣೆ ಮಾಡುವುದರಿಂದ ಆಗಸ್ಟ್ 11 ಮತ್ತು 12 ರಂದು ಉಡುಪಿಯಲ್ಲಿ ಅಷ್ಟಮಿಯ ಸಂಭ್ರಮ ಇರುವುದಿಲ್ಲ. ಬದಲಾಗಿ ಸೆಪ್ಟೆಂಬರ್‌ 10ರಂದು ಕೃಷ್ಣಜನ್ಮಾಷ್ಟಮಿ ಹಾಗೂ ಸೆ. 11ರಂದು ಶ್ರೀಕೃಷ್ಣ ಲೀಲೋತ್ಸವ ಆಚರಣೆ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ. ದೇಶದಾದ್ಯಂತ ಆ. 11ರಂದು ಕೃಷ್ಣಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತದೆ. ಆದರೆ ಇದು ಚಾಂದ್ರಮಾನ ಪಂಚಾಂಗದ ಪ್ರಕಾರ ಬರುವ ಕೃಷ್ಣಾಷ್ಟಮಿ ಆಗಿರುವುದರಿಂದ ಕೃಷ್ಣಮಠದಲ್ಲಿ ಇದನ್ನು ಆಚರಣೆ ಮಾಡುವುದಿಲ್ಲ. ಕೃಷ್ಣಮಠದಲ್ಲಿ ಸೆ. 10ರಂದು ಮಧ್ಯರಾತ್ರಿ […]