ಜುಲೈ 1ರಂದು ಕೃಷ್ಣಮಠದಲ್ಲಿ ಯತಿವರ್ಯರಿಗೆ ತಪ್ತಮುದ್ರಾಧಾರಣೆ: ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಅವಕಾಶ

ಉಡುಪಿ: ಚಾತುರ್ಮಾಸ ವೃತಾಚರಣೆಯ ಆರಂಭದ ಆಷಾಢ ಶುದ್ಧ ಏಕಾದಶಿಯಂದು ಶ್ರೀಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ ಮಾಡುವುದು ಸಂಪ್ರದಾಯ. ಅದರಂತೆ ಜುಲೈ 1ರ ಏಕಾದಶಿಯಂದು ಶ್ರೀಕೃಷ್ಣಮಠದಲ್ಲಿ ತಪ್ತಮುದ್ರಾಧಾರಣೆ ಸಂಬಂಧಿಸಿದ ಸಕಲ ಧಾರ್ಮಿಕ ಕಾರ್ಯಗಳು ಶಾಸ್ತ್ರೋಕ್ತವಾಗಿ ನಡೆಯಲಿದ್ದು, ಈ ಕಾರ್ಯಕ್ರಮ ಯತಿವರ್ಯರಿಗೆ ಮಾತ್ರ ಸೀಮಿತವಾಗಿರುತ್ತದೆ. ಮುಂದಿನ ಯಾವುದಾದರೂ ಶುಭ ದಿನಗಳಲ್ಲಿ ಸಾರ್ವಜನಿಕರಿಗೆ ಮುದ್ರಾಧಾರಣೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ಹೇಳಿದರು. ಜೂನ್ 30ರಂದು ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ದೇವರಿಗೆ ವಾರ್ಷಿಕ ಮಹಾಭಿಷೇಕ (ಸೀಯಾಳ ಅಭಿಷೇಕ) ಜರುಗಲಿದೆ. […]
ಗ್ರಹಣಪೂರ್ವದಲ್ಲಿ ಉಡುಪಿ ಕೃಷ್ಣಮಠದಲ್ಲಿ ಮಠಾಧೀಶರಿಂದ ವಿಶೇಷ ಪೂಜೆ, ಜಪ

ಉಡುಪಿ: ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣಮಠದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಕೃಷ್ಣದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪರ್ಯಾಯ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ, ಕಿರಿಯ ವಿದ್ಯಾರಾಜೇಶ್ವರ, ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ, ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಜಪ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಕುಂಜಾರು ಸಮೀಪದ ಬಾಣತೀರ್ಥ ಮಠದಲ್ಲಿ ವಿಶೇಷ ಜಪ, ಪೂಜೆಯಲ್ಲಿ ಭಾಗವಹಿಸಿದರು. ಪೇಜಾವರ ಮಠದ […]