ಸಾಣೂರು ಮುರತಂಗಡಿ ಪರಿಸರದ ಜಾಗೃತ ನಾಗರಿಕರ ಛಲ ಬಿಡದ ಒತ್ತಡಕ್ಕೆ ಕೊನೆಗೂ ಮಣಿದ ಹೆದ್ದಾರಿ ಇಲಾಖೆ: ತಾತ್ಕಾಲಿಕ ಸಂಪರ್ಕ ರಸ್ತೆ ನಿರ್ಮಾಣ, ಜನರ ಸುರಕ್ಷತೆಗೆ ಒತ್ತಾಯ.

ಕಾರ್ಕಳ: ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಗೋದಾಮಿಗೆ ಹೋಗಲು ರಾ.ಹೆ 169 ಮುರತಂಗಡಿ ಸರ್ವಿಸ್ ರಸ್ತೆಯಿಂದ ಸಂಪರ್ಕ ರಸ್ತೆ ನಿರ್ಮಾಣವು ಡಿಸೆಂಬರ್ 19 ರಂದು ಪೂರ್ಣಗೊಂಡಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ವಾಹನಗಳಿಗೆ ಮತ್ತು ಗ್ರಾಹಕರಿಗೆ ಸರಾಗವಾಗಿ ಸಂಚರಿಸಲು ಅನುಕೂಲವಾಗಿದೆ. ಕಳೆದ ಕೆಲವು ದಿನಗಳಿಂದ ಮುರತಂಗಡಿ ಪರಿಸರದ ಸರ್ವಿಸ್ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಸಾಣೂರು ಸೊಸೈಟಿಗೆ ಹೋಗುವ ಸಂಪರ್ಕ ರಸ್ತೆ ಕಡಿತವಾಗಿತ್ತು. ಸೊಸೈಟಿಗೆ ಪ್ರತಿನಿತ್ಯ ಬರುವ ನೂರಾರು ಗ್ರಾಹಕರಿಗೆ ಇದರಿಂದಾಗಿ ತೀವ್ರ ತೊಂದರೆಯಾಗಿತ್ತು. ಸ್ವಲ್ಪ ತಡವಾಗಿಯಾದರೂ ಜನರ ಒತ್ತಡಕ್ಕೆ […]