ಉಡುಪಿ: ಸೆಲೂನ್ ಮಾಲೀಕ ಕೋವಿಡ್ ಸೋಂಕಿನಿಂದ ನಿಧನ

ಉಡುಪಿ: ಇಲ್ಲಿನ ಚಿತ್ತರಂಜನ್ ಸರ್ಕಲ್‌ ನಲ್ಲಿರುವ ನೂತನ ಹೇರ್ ಡ್ರೆಸ್ಸೆಸ್ ನ ಮಾಲೀಕ ಬನ್ನಂಜೆ ನಿವಾಸಿ ಅಶೋಕ್ ಭಂಡಾರಿ ಅವರು ಸೋಮವಾರ ಕೋವಿಡ್ ಸೋಂಕಿನಿಂದ ನಿಧನ ಹೊಂದಿದರು. ಇವರು ಗೆಳೆಯರ ಬಳಗ ಮಾರುತಿ ವೀಥೀಕಾ ಟೀಮ್ ನ ಸದಸ್ಯರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.