ಉಡುಪಿ: ರಸ್ತೆ ಅಪಘಾತ; ಯುವಕ ಸ್ಥಳದಲ್ಲೇ ಮೃತ್ಯು
ಉಡುಪಿ: ದ್ವಿಚಕ್ರ ವಾಹನ ಸ್ಕಿಡ್ ಆಗಿ ಯುವಕನೊಬ್ಬ ಮೃತಪಟ್ಟ ಘಟನೆ ರಾಪ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆ ಸೇತುವೆ ಬಳಿ ಭಾನುವಾರ ರಾತ್ರಿ ಸಂಭವಿಸಿದೆ. ಕೊಳಲಗಿರಿಯ ನಿವಾಸಿ ಆಸೀಫ್(19) ಎಂಬಾತ ಮೃತ ಯುವಕ. ಈತ ನಿನ್ನೆ ರಾತ್ರಿ ಉಡುಪಿಯಿಂದ ಕೊಳಲಗಿರಿಗೆ ಹೊಂಡಾ ಆಕ್ಟೀವಾದಲ್ಲಿ ಹೋಗುತ್ತಿದ್ದು, ಈ ವೇಳೆ ಸಂತೆಕಟ್ಟೆ ಸೇತುವೆ ಬಳಿ ಸ್ಕೂಟರ್ ಏಕಾಏಕಿಯಾಗಿ ಸ್ಕೀಡ್ ಆಗಿದೆ. ಇದರ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಆಸೀಫ್ ನ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ. ಬ್ರಹ್ಮಾವರ ಪೊಲೀಸ್ […]