ಉಡುಪಿ: ರಿಕ್ಷಾ ಚಾಲಕರ- ಮಾಲೀಕರ ಸಂಘಟನೆಯಿಂದ 5 ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯಧನ ವಿತರಣೆ

ಉಡುಪಿ: ಉಡುಪಿಯ ಕೋರ್ಟ್ ಹಿಂಬದಿ ರಸ್ತೆಯ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘಟನೆ ವತಿಯಿಂದ ರಿಕ್ಷಾ ಚಾಲಕರ ಸಂಘಟನೆಯ ಕ್ಷೇಮ ನಿಧಿ ಪ್ರಯುಕ್ತ ಲಕ್ಕಿ ಡ್ರಾ ಕಾರ್ಯಕ್ರಮ ಉಡುಪಿಯ ಚಿತ್ತ ರಂಜನ್ ಸರ್ಕಲ್ ಸಮೀಪದ ಹಿಂದಿ ಪ್ರಚಾರ ಸಮಿತಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ 5 ಮಕ್ಕಳಿಗೆ ಸಹಾಯಧನವನ್ನು ವಿತರಿಸಲಾಯಿತು. ರಿಕ್ಷಾ ಚಾಲಕರ ಸಂಘಟನೆಯ ಗೌರವಾಧ್ಯಕ್ಷ  ಹಾಗೂ ಮಂಗಳೂರು ವಿಭಾಗದ ಬಜೆಪಿ ವಿಭಾಗ ಪ್ರಭಾರಿ ಕೆ. ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ನಿರ್ದಿಷ್ಟ ಉದ್ದೇಶದಿಂದ ಆರಂಭಗೊಂಡ […]