ಉಡುಪಿ: ಬಸ್ ಡಿಕ್ಕಿ ಹೊಡೆದು ಉದ್ಯಾವರದ ನಿವಾಸಿ ಮೃತ್ಯು

ಉಡುಪಿ: ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉದ್ಯಾವರ ಪೆಟ್ರೋಲ್ ಪಂಪ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ರಾತ್ರಿ ಸಂಭವಿಸಿದೆ. ಮೃತರನ್ನು ಉದ್ಯಾವರ ಅಂಕುದ್ರು ನಿವಾಸಿ ರಾಜು ಪೂಜಾರಿ ಅವರ ಮಗ ಸುನಿಲ್ (38) ಎಂದು ಗುರುತಿಸಲಾಗಿದೆ. ಸುನಿಲ್ ಪೆಟ್ರೋಲ್ ಪಂಪ್ ಬಳಿ ನಿಂತಿದ್ದ ವೇಳೆ ಮಂಗಳೂರಿನಿಂದ ಉಡುಪಿ ಕಡೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಸ್ಥಳದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಸುನಿಲ್ ಅವಿವಾಹಿತನಾಗಿದ್ದು, ಸೀಟ್ ಕುಶನ್ ಕೆಲಸ […]