ಉಡುಪಿ: ಅಪರೂಪದ ಬಿಳಿ ಪ್ರಬೇಧದ ಗೂಬೆ ಮರಿ ರಕ್ಷಣೆ

ಉಡುಪಿ: ತಾಯಿ ಗೂಬೆಯಿಂದ ದೂರವಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರೂಪದ ಬಿಳಿ ಪ್ರಬೇಧದ ಗೂಬೆ ಮರಿಯೊಂದು ಬನ್ನಂಜೆಯ ಸಾಯಿರಾಧ ಸಮಧಾನ ವಸತಿ ಸಂಕೀರ್ಣದ ವಾಹನ ನಿಲುಗಡೆ ಸ್ಥಳದಲ್ಲಿ ಪತ್ತೆಯಾಗಿದೆ. ಸಂಕೀರ್ಣದ ನಿವಾಸಿ ರೋಶನಿ ಶೆಟ್ಟಿ ಅವರು ಗೂಬೆ ಮರಿಯನ್ನು ರಕ್ಷಿಸಿ ಆಹಾರ ಒದಗಿಸಿ ಉಪಚರಿಸಿದ್ದರು. ಅವರು ನೀಡಿದ ಮಾಹಿತಿ ಮೆರೆಗೆ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಗೂಬೆ ಮರಿಯನ್ನು ಅರಣ್ಯ ರಕ್ಷಕ ಕೇಶವ ಪೂಜಾರಿ ಅವರಿಗೆ ಹಸ್ತಾಂತರಿಸಿದರು. ಪತ್ತೆಯಾಗಿರುವ ಗೂಬೆ ಮರಿಯು […]