ಉಡುಪಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ; ಆರೋಪಿಯ ಬಂಧನ

ಉಡುಪಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕ್ ಸಿಬ್ಬಂದಿಯನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ. ಬಂಧಿತನನ್ನು ಕಾಪುವಿನ ಬ್ಯಾಂಕ್ ಆಫ್ ಬರೋಡ ( ಹಿಂದಿನ ವಿಜಯ ಬ್ಯಾಂಕ್) ಶಾಖೆಯ ಆಟೆಂಡರ್ ಕುಕ್ಕಿಕಟ್ಟೆ ಮಂಚಿ ನಿವಾಸಿ ಸುಕೇಶ್ ಶೆಟ್ಟಿ(23) ಎಂದು ಗುರುತಿಸಲಾಗಿದೆ. ಈತ ಹತ್ತನೆ ತರಗತಿಯ ಬಾಲಕಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಈ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ಬಾಲಕಿ ಮನೆಯವರು ದೂರು ನೀಡಿದ್ದಾರೆ.