ಉಡುಪಿ: ಶ್ವಾನಕ್ಕಾಗಿ ಜಗಳ; ಯುವಕನನ್ನು ಬಿಟ್ಟು ಯುವತಿಯೊಂದಿಗೆ ತೆರಳಿದ ಶ್ವಾನ!

ಉಡುಪಿ: ಶ್ವಾನಕ್ಕಾಗಿ ಯುವಕ ಯುವತಿ ಜಗಳ ಮಾಡಿಕೊಂಡ ವಿಚಿತ್ರ ಘಟನೆಯೊಂದು ನಗರದ ಅಜ್ಜರಕಾಡು ಪೆಟ್‌ಶಾಪ್‌ ಬಳಿ ನಡೆದಿದೆ. ಏನಿದು ಪ್ರಸಂಗ: ಅಜ್ಜರಕಾಡಿನ ಪೆಟ್ ಶಾಪ್ ಬಳಿ‌ ಯುವಕನೊಬ್ಬ ತನ್ನ ಕಪ್ಪುಬಣ್ಣದ ಸಾಕು ನಾಯಿಯನ್ನು ಕರೆದುಕೊಂಡು ಬಂದಿದ್ದನು. ಇದೇ ವೇಳೆ ಅಲ್ಲಿಗೆ ಯುವತಿಯೊಬ್ಬಳು ಬಂದಿದ್ದು, ಯುವಕನ ಬಳಿಯಲ್ಲಿ ಇದ್ದ ನಾಯಿಯನ್ನು ಕಂಡು ಇದು ನನ್ನ ಸಾಕು ನಾಯಿ. ಆರೇಳು ತಿಂಗಳ ಹಿಂದೆ ಕಾಣೆಯಾಗಿತ್ತು. ನಿನಗೆ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿದ್ದಾಳೆ. ಆಗ ಯುವಕ ಕೂಡ ಇದು ನನ್ನ ನಾಯಿ. […]