ಉಡುಪಿ: ಗಾಯಾಳು ಗರುಡ ಪಕ್ಷಿಯ ರಕ್ಷಣೆ
ಉಡುಪಿ: ರೆಕ್ಕೆಗೆ ಬಲವಾದ ಗಾಯವಾಗಿ ಹಾರಲಾಗದೆ ಅಸಹಾಯಕ ಸ್ಥಿತಿಯಲ್ಲಿ ಉದ್ಯಾವರ ಸಮೀಪ ಕಂಡುಬಂದ ಗರುಡ ಪಕ್ಷಿಯನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿದೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ರಾಮದಾಸ್ ಪಾಲನ್ ಉದ್ಯಾವರ, ತಾರಾನಾಥ್ ಮೇಸ್ತ ಶಿರೂರು ಅವರು ಗಾಯಾಳು ಗರುಡ ಪಕ್ಷಿಯನ್ನು ರಕ್ಷಿಸಿದ್ದು, ನಂತರ ಉಪವಲಯ ಅರಣ್ಯಾಧಿಕಾರಿ ಗುರುರಾಜ್ ಕಾವ್ರಾಡಿ ಅವರ ವಶಕ್ಕೆ ನೀಡಿದ್ದಾರೆ. ಈ ಸಂದರ್ಭ ಅರಣ್ಯ ರಕ್ಷಕ ಕೇಶವ ಪೂಜಾರಿ, ಸಿಬ್ಬಂದಿ ಜೋಯ್ ಉಪಸ್ಥಿತರಿದ್ದರು.