ಉಡುಪಿ: ಸ್ಥಳೀಯ ದೂರು ಸಮಿತಿಯಿಂದ ಕೈಬಿಟ್ಟ ವಿಚಾರ; ಡಿಸಿ ವಿರುದ್ಧ ಸಿಡಿದೆದ್ದ ವಕೀಲೆ ಸಹನಾ ಕುಂದರ್

ಉಡುಪಿ: ನನ್ನನ್ನು ಉಡುಪಿ ಜಿಲ್ಲಾ ಮಟ್ಟದ ಸ್ಥಳೀಯ ದೂರು ಸಮಿತಿಗೆ ಆಯ್ಕೆ ಮಾಡಿ ಆದೇಶ ಹೊರಡಿಸಿದ ದಿನವೇ ಯಾವ ಕಾರಣಕ್ಕಾಗಿ ಆದೇಶವನ್ನು ಹಿಂಪಡೆಯಲಾಯಿತು ಎಂಬುದನ್ನು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ವಕೀಲೆ ಮತ್ತು ಬೆಳ್ಮಣ್ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಹನಾ ಕುಂದರ್ ಒತ್ತಾಯಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ನನ್ನನ್ನು ಜುಲೈ 8ರಂದು ಜಿಲ್ಲಾಮಟ್ಟದ ಸ್ಥಳೀಯ ದೂರು ಸಮಿತಿಗೆ ಆಯ್ಕೆ ಮಾಡಲಾಗಿತ್ತು. ಈ ಸಂಬಂಧ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದರು. ಉಡುಪಿಯಲ್ಲಿ ಮಹಿಳೆಯರಿಗೆ ಆಗುವ ಲೈಂಗಿಕ ದೌರ್ಜನ್ಯ, […]