ಉಡುಪಿ: ನಾಳೆ (ಜುಲೈ 1)ಯಿಂದ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಪುನರಾರಂಭ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರವು ನಾಳೆಯಿಂದ (ಜುಲೈ 1) ಪುನರಾರಂಭಗೊಳ್ಳಲಿದೆ. ಜಿಲ್ಲೆಯಲ್ಲಿ ಒಟ್ಟು 450 ಸರ್ವಿಸ್ ಹಾಗೂ ಸಿಟಿ ಬಸ್‌ಗಳಿದ್ದು, ಇವುಗಳಲ್ಲಿ ಶೇ.30ರಷ್ಟು ಬಸ್ ಮಾತ್ರ ನಾಳೆಯಿಂದ ರಸ್ತೆಗೆ ಇಳಿಯಲಿದೆ. ಅವು ಗಳಲ್ಲಿ ಕೆಲವು ಬಸ್‌ಗಳು ಮಂಗಳೂರಿಗೂ ಸಂಚರಿಸಲಿದೆ. ಉಳಿದ ಬಸ್‌ಗಳನ್ನು ಮುಂದೆ ಹಂತ ಹಂತವಾಗಿ ಓಡಿಸಲಾಗುವುದು. ಅದೇ ರೀತಿ ನಾಳೆಯಿಂದ ಶೇ. 25ರಷ್ಟು ಟಿಕೆಟ್ ದರ ಕೂಡ ಹೆಚ್ಚಿಸಲಾಗುವುದು ಎಂದು ಕೆನರಾ ಬಸ್ ಮಾಲಕರ […]