ಉಡುಪಿ: ಸೆ.5ರಂದು ‘ಮುಚ್ಚಿಟ್ಟ ದಲಿತ ಚರಿತ್ರೆ’ ಕೃತಿ ಬಿಡುಗಡೆ; ಲೇಖಕರ ಜತೆ ಸಂವಾದ
ಉಡುಪಿ: ಲೇಖಕ ರಾಕೇಶ್ ಶೆಟ್ಟಿ ಅವರ ‘ಮುಚ್ಚಿಟ್ಟ ದಲಿತ ಚರಿತ್ರೆ’ ಕೃತಿಯ ಸಾಂಕೇತಿಕ ಬಿಡುಗಡೆ ಮತ್ತು ಲೇಖಕರ ಜೊತೆ ಸಂವಾದ ಕಾರ್ಯಕ್ರಮ ಉಡುಪಿ ಅಂಬಲಪಾಡಿಯ ಹೋಟೆಲ್ ಕಾರ್ತಿಕ್ ಎಸ್ಟೇಟ್ ನಲ್ಲಿ ಸೆಪ್ಟೆಂಬರ್ 5 ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರಿನ ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.