ಮೂರು ದಿನಗಳೊಳಗೆ ಉಡುಪಿ ಜಿಲ್ಲೆ ಗ್ರೀನ್ ಝೋನ್ ಗೆ ಸೇರ್ಪಡೆ: ನಿರ್ಬಂಧ ಸಡಿಲಿಕೆಗೆ ಕ್ರಮ: ಸಚಿವ ಬೊಮ್ಮಾಯಿ
ಉಡುಪಿ: ಕೋವಿಡ್-19 ನಿಂದ ಮುಕ್ತವಾಗಿರುವ ಉಡುಪಿ ಜಿಲ್ಲೆ ಮೂರು ದಿನಗಳಲ್ಲಿ ಆರೆಂಜ್ ಝೋನ್ ನಿಂದ ಗ್ರೀನ್ ಝೋನ್ ಗೆ ಸೇರ್ಪಡೆಯಾಗಲಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಣಿಪಾಲ ರಜತಾದ್ರಿಯಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಜಿಲ್ಲೆಯು ಹಸಿರು ವಲಯಕ್ಕೆ ಸೇರ್ಪಡೆಗೊಂಡ ಬಳಿಕ ರಾಜ್ಯದ 11 ಹಸಿರು ವಲಯ ಜಿಲ್ಲೆಗಳಂತೆ ಉಡುಪಿಯಲ್ಲೂ ನಿರ್ಬಂಧ ಸಡಿಲಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದರು. ಹೊರರಾಜ್ಯ […]