ನಾಡದೋಣಿ ಮೀನುಗಾರಿಕೆಯನ್ನು ಆಗಸ್ಟ್ 30ರ ವರೆಗೆ ವಿಸ್ತರಿಸಿ: ಮೀನುಗಾರರ ಆಗ್ರಹ

ಮಲ್ಪೆ: ಮಳೆಗಾಲ ಋತುವಿನ ನಾಡದೋಣಿ ಮೀನುಗಾರಿಕೆಯ ಅವಧಿಯನ್ನು ಒಂದು ತಿಂಗಳು ವಿಸ್ತರಿಸುವಂತೆ ಮಲ್ಪೆ ಸಾಂಪ್ರಾದಾಯಿಕ ನಾಡದೋಣಿ ಸಂಘ, ನಾಡಟ್ರಾಲ್‌ದೋಣಿ ಸಂಘ ಹಾಗೂ ಸಾಂಪ್ರಾದಾಯಿಕ ಕಂತು ಬಲೆ ದೋಣಿ ಸಂಘ ಆಗ್ರಹಿಸಿದೆ. ನಾಡದೋಣಿ ಮೀನುಗಾರರ ನಿಯೋಗವು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧಿಕಾರಿ ಜಿ. ಜಗದೀಶ್, ಮೀನುಗಾರಿಕಾ ಜಂಟಿ ನಿರ್ದೇಶಕ, ಮೀನುಗಾರಿಕಾ ಸಹಾಯಕ ನಿರ್ದೇಶಕರು, ಮಲ್ಪೆ ಮೀನುಗಾರರ ಸಂಘ ಮತ್ತು ಆಳಸಮುದ್ರ ತಾಂಡೇಲರ ಸಂಘಕ್ಕೆ ಮನವಿ ನೀಡಿ ಒತ್ತಾಯಿಸಿದೆ. ಈ ಹಿಂದೆ […]