ಉಡುಪಿ: ಮೂರು ಲಕ್ಷ ಮೌಲ್ಯದ ಗಾಂಜಾ, ಅಕ್ರಮ ಮದ್ಯ ವಶ: ನಾಲ್ವರ ಬಂಧನ

ಉಡುಪಿ: ಅಬಕಾರಿ ಇಲಾಖೆಯು ಜಿಲ್ಲೆಯಲ್ಲಿ ಅಕ್ಟೋಬರ್ 1 ರಿಂದ 14ರ ವರೆಗೆ ವಿಶೇಷ ಕಾರ್ಯಾಚರಣೆ ನಡೆಸಿ, ಒಟ್ಟು 3 ಲಕ್ಷ ಮೌಲ್ಯದ 429 ಗ್ರಾಂ ಗಾಂಜಾ, 29.520 ಲೀ. ಅಕ್ರಮ ಮದ್ಯ ಹಾಗೂ 19.500 ಲೀ. ಗೋವಾ ಮದ್ಯ ವಶಪಡಿಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿಲಾಗಿದ್ದು, ನಾಲ್ಕು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ತಿಳಿಸಿದ್ದಾರೆ.