ಉಡುಪಿ: ಕೊರೊನಾ ಹೆಚ್ಚಿರುವ ಪಂಚಾಯತ್ ಗಳಲ್ಲಿ ಪೂರ್ತಿ ಲಾಕ್ ಡೌನ್; ಯಾವುದಕ್ಕಿದೆ ಅವಕಾಶ?, ಯಾವುದಕ್ಕಿಲ್ಲ?

ಉಡುಪಿ (ಉಡುಪಿ ಎಕ್ಸ್‌ಪ್ರೆಸ್ ವರದಿ): ಜಿಲ್ಲೆಯಲ್ಲಿ 50ಕ್ಕಿಂತ ಅಧಿಕ ಸೋಂಕಿತರಿರುವ ಗ್ರಾಮಗಳಲ್ಲಿ ಜೂನ್ 2ರಿಂದ ಐದು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಲಾಕ್ ಡೌನ್ ಘೋಷಿಸಲಾಗಿರುವ ಪಂಚಾಯತ್ ಗಳಲ್ಲಿ ನಾಳೆ (ಜೂನ್ 1) ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಲಾಕ್ ಡೌನ್ ಘೋಷಣೆಯಾಗಿರುವ ಗ್ರಾಮಸ್ಥರು ಐದು ದಿನಗಳಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ನಾಳೆಯೇ ಖರೀದಿಸಬೇಕು. ಉಳಿದಂತೆ ಮುಂದಿನ ಐದು ದಿನಗಳ ಕಾಲ ಪೂರ್ತಿ ಲಾಕ್ ಡೌನ್ ಇರಲಿದೆ. […]