ಕೊರೊನಾದಿಂದಾಗಿ ಉಡುಪಿ ಕೃಷ್ಣಮಠದ ಆದಾಯಕ್ಕೆ ಹೊಡೆತ: ಒಂದು ಕೋಟಿ ಸಾಲಕ್ಕಾಗಿ ಬ್ಯಾಂಕ್ ಗೆ ಅರ್ಜಿ
ಉಡುಪಿ: ಕೊರೊನಾದಿಂದ ಉಡುಪಿ ಶ್ರೀಕೃಷ್ಣಮಠದ ಆದಾಯ ಭಾರೀ ಪ್ರಮಾಣದಲ್ಲಿ ಕಡಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮಠವು 1 ಕೋಟಿ ರೂ. ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿದೆ. ಕೋವಿಡ್ ಲಾಕ್ ಡೌನ್ ವೇಳೆ ಸರ್ಕಾರದ ಆದೇಶದಂತೆ ಮಠಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಇದೀಗ ಲಾಕ್‌ಡೌನ್ ತೆರವಾಗಿದ್ದರೂ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರತಿದಿನ ಹೆಚ್ಚಾಗುತ್ತಿರುವ ಕಾರಣಕ್ಕಾಗಿ ಮಠವು ಭಕ್ತರ ಪ್ರವೇಶಕ್ಕೆ ಇನ್ನೂ ಮುಕ್ತವಾಗಿಲ್ಲ. ಇದರಿಂದ ಮಠದ ಆದಾಯ ಸಂಪೂರ್ಣ ನಿಂತುಹೋಗಿದೆ. ನಿತ್ಯ 1.25 ಲಕ್ಷ ಖರ್ಚು: ಮಠದಲ್ಲಿ ನಿತ್ಯ ಕೃಷ್ಣ ದೇವರ […]