ಉಡುಪಿ:ವ್ಯಕ್ತಿ ನಾಪತ್ತೆ

ಉಡುಪಿ: ಧಾರ್ಮಿಕ ಸ್ಥಳಗಳ ವೀಕ್ಷಣೆಗೆಂದು ಜಿಲ್ಲೆಗೆ ಬಂದಿದ್ದ ಕೇರಳ ಮೂಲದ ಜಯ ವಿಜಯನ್(62) ಎಂಬ ವ್ಯಕ್ತಿಯು ಸೆಪ್ಟಂಬರ್ 22 ರಂದು ಕೃಷ್ಣ ಮಠಕ್ಕೆ ತೆರಳಿದ ಸಂದರ್ಭದಲ್ಲಿ ನಾಪತ್ತೆಯಾಗಿರುತ್ತಾರೆ. 167 ಸೆ.ಮೀ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಮಲಯಾಳಂ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಉಡುಪಿ: ಕೇರಳದ ವ್ಯಕ್ತಿ ನಾಪತ್ತೆ

ಉಡುಪಿ: ಕೃಷ್ಣ ಮಠಕ್ಕೆ ಆಗಮಿಸಿದ ಕೇರಳ ಮೂಲದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಸೆ.22ರಂದು ರಾತ್ರಿ ವೇಳೆ ನಡೆದಿದೆ. ನಾಪತ್ತೆಯಾದವರನ್ನು ಕೇರಳ ರಾಜ್ಯದ ತ್ರಿಶೂರು ಜಿಲ್ಲೆಯ ಐರಿಂಜಲಕುಡ ನಿವಾಸಿ ಜಯಿವಿಜಯನ್(65) ಎಂದು ಗುರುತಿಸಲಾಗಿದೆ. ಒಟ್ಟು 33 ಮಂದಿ ಕರ್ನಾಟಕ ರಾಜ್ಯದಲ್ಲಿರುವ ದೇವಾಸ್ಥಾನಗಳಿಗೆ ಭೇಟಿ ನೀಡಲು ಸೆ.20ರಂದು ಕೇರಳದಿಂದ ಹೊರಟಿದ್ದು, ಕೊಲ್ಲೂರು, ಮುರುಡೇಶ್ವರ ದೇವಾಸ್ಥಾನಕ್ಕೆ ತೆರಳಿ ಉಡುಪಿ ಕೃಷ್ಣ ಮಠಕ್ಕೆ ಆಗಮಿಸಿದ್ದರು. ಮಠದಲ್ಲಿ ರಾತ್ರಿ ಊಟ ಮಾಡಿ ಹೊರಗಡೆ ಬಂದಿದ್ದು, ಆ ವೇಳೆ ತಂಡದಲ್ಲಿದ್ದ ಜಯವಿಜಯನ್ ನಾಪತ್ತೆ ಯಾಗಿರುವುದು ಕಂಡುಬಂದಿದೆ.ಈ […]