ಕಳರಿ ಸಮರ ಕಲೆ ಶಾಲೆಗಳಲ್ಲಿಯೂ ಕಲಿಸುವ ಕಾರ್ಯವಾಗಬೇಕು: ಕಳರಿಪಟು ಮೀನಾಕ್ಷಿ ಅಮ್ಮ

ಉಡುಪಿ: ಮಾನಸಿಕ ಹಾಗೂ ದೈಹಿಕ ಸಧೃಡತೆಗೆ ಕಳರಿ ಸಮರ ಕಲೆ ಪೂರಕವಾಗಿದೆ. ಈ ಕಲೆಯನ್ನು ಮಕ್ಕಳಿಗೆ ಅಗತ್ಯವಾಗಿ ಕಲಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಕಳರಿಪಟು ಮೀನಾಕ್ಷಿ ಅಮ್ಮ ಹೇಳಿದ್ದಾರೆ.ಶ್ರೀಕೃಷ್ಣ ಸೇವಾ ಬಳಗದ ಆಶ್ರಯದಲ್ಲಿ ಉಡುಪಿ ಶ್ರೀಪೂರ್ಣ ಪ್ರಜ್ಞ ಸಭಾಂಗಣದಲ್ಲಿ ಆಯೋಜಿಸಿದ ಕಳರಿ ಸಮರ ಕಲೆ ಪ್ರಾತ್ಯಕ್ಷತೆ ಮತ್ತು ಪ್ರದರ್ಶನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಹೆಣ್ಣು ಮಕ್ಕಳು ತಮ್ಮ ಆತ್ಮರಕ್ಷಣೆಗಾಗಿ ಕಳರಿ ಸಮರ ಕಲೆಯನ್ನು ಅಭ್ಯಸಿಸಬೇಕು. ಇದರಿಂದ ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಧೃಡರಾಗುತ್ತಾರೆ. […]