ಉಡುಪಿ: ಪ್ರಧಾನಿ ಹುಟ್ಟುಹಬ್ಬಕ್ಕೆ ಪೂರ್ವಭಾವಿಯಾಗಿ ಕಡಿಯಾಳಿ ಮಹಿಷಮರ್ದಿನಿ ದೇವಿಗೆ ಬಳೆ ಸಮರ್ಪಣೆ
ಉಡುಪಿ: ಸೆಪ್ಟೆಂಬರ್ 17ಕ್ಕೆ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಕಡಿಯಾಳಿ ಮಹಿಷಮರ್ದಿನಿ ದೇವರಿಗೆ ಪ್ರಿಯವಾದ ಬಳೆಯನ್ನು ಸಮರ್ಪಿಸಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯಕ್ಕಾಗಿ ಮತ್ತು ದೇಶದ ಸುಭಿಕ್ಷೆಗಾಗಿ ದೇವರಲ್ಲಿ ಪ್ರಾರ್ಥಿಸಿ ಒಂದು ಬುಟ್ಟಿ ಬಳೆಯನ್ನು ಕಡಿಯಾಳಿ ಮಹಿಷಮರ್ದಿನಿ ದೇವರಿಗೆ ಅರ್ಪಿಸಲಾಯಿತು. ಪೂಜೆಯ ಬಳಿಕ ಬಳೆಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು ಬಿಜೆಪಿ ರಾಜ್ಯ […]