ಉಡುಪಿ: ಸಚಿವ ಜಮೀರ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುತ್ತೇನೆ – ಟಿ.ಜೆ ಅಬ್ರಹಾಂ ಗುಡುಗು
ಉಡುಪಿ: ಸಚಿವ ಜಮೀರ್ ಹೈಕೋರ್ಟ್ ತೀರ್ಪು ಬಗ್ಗೆ ನಾಲಿಗೆ ಹರಿಬಿಟ್ಟದ್ದು ಸರಿಯಲ್ಲ. ಈ ತೀರ್ಪನ್ನು ಪೊಲಿಟಿಕಲ್ ಆದೇಶ ಎಂದು ಹೇಳುತ್ತಾರೆ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವೆ ಎಂದು ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಗುಡುಗಿದ್ದಾರೆ. ಸಿಎಂ ಕುರಿತ ಹೈಕೋರ್ಟ್ ತೀರ್ಪು ರಾಜಕೀಯಪ್ರೇರಿತ ತೀರ್ಪು ಎಂಬ ಸಚಿವ ಜಮೀರ್ ಹೇಳಿಕೆಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೈಕೋರ್ಟ್ ತೀರ್ಪು ಬಗ್ಗೆ ಮಾತನಾಡುವುದು ಅಂದರೆ ಹುಡುಗಾಟನಾ?. ರಾಜಕಾರಣದಲ್ಲಿ ಭಾಷಣ ಬಿಗಿದ ಹಾಗೆ ಮಾತನಾಡಿದರೆ ಆಗುತ್ತಾ?. […]