ಉಡುಪಿ: ಅಪಾಯ ಆಹ್ವಾನಿಸುತ್ತಿವೆ ಕಬ್ಬಿಣದ ಸರಳುಗಳು; ದುರಸ್ತಿಗೆ ಆಗ್ರಹ

ಉಡುಪಿ: ಇಲ್ಲಿನ ಕಲ್ಸಂಕ ಜಂಕ್ಷನ್ ನಿಂದ ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವನ್ನು ಸಂಪರ್ಕಿಸುವ ರಸ್ತೆಯ ತಿರುವಿನಲ್ಲಿ ಕಾಂಕ್ರೀಟ್ ರಸ್ತೆಯ ಜಲ್ಲಿ ಕಲ್ಲುಗಳೆಲ್ಲ ಕಿತ್ತುಹೋಗಿದ್ದು, ರಸ್ತೆಯ ಒಳಗಿದ್ದ ಕಬ್ಬಿಣದ ಸರಳುಗಳು ಮೇಲೆದ್ದು ಅಪಾಯವನ್ನು ಆಹ್ವಾನಿಸುತ್ತಿದೆ. ಕಳಪೆ ಗುಣಮಟ್ಟದ ಕಾಮಗಾರಿಯೇ ಈ ರೀತಿಯ ಸಮಸ್ಯೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮುಖ್ಯ ರಸ್ತೆಯಲ್ಲಿ ನಸುಕಿನ ಜಾವ ವಾಯು ವಿಹಾರಿಗಳು, ಯಾತ್ರಿಕರು, ಪಾದಚಾರಿಗಳು, ಸಂಚರಿಸುತ್ತಾರೆ. ಕಬ್ವಿಣದ ಸರಳುಗಳು ಕಾಲಿಗೆ ತಾಗಿ ಪಾದಚಾರಿಗಳು ಎಡವಿಬಿದ್ದು ಗಾಯಾಳುಗಳಾದ […]