ಉಡುಪಿ: ತುಳುನಾಡ ಟೈಗರ್ಸ್ ನ ಮೂರನೇ ವರ್ಷದ ಹುಲಿ‌ ಕುಣಿತದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ತುಳುನಾಡ ಟೈಗರ್ಸ್ ಉಡುಪಿ ಇದರ ಆಶ್ರಯದಲ್ಲಿ ರಾಜೇಶ್ ಸುವರ್ಣ ನೇತೃತ್ವದಲ್ಲಿ ‌ನಿಟ್ಟೂರಿನ ಹೈಸ್ಕೂಲ್ ಬಳಿಯ ತಾಂಗದಗಡಿಯಲ್ಲಿ ಸೆಪ್ಟೆಂಬರ್ 6 ಮತ್ತು 7ರಂದು ನಡೆಯಲಿರುವ ಮೂರನೇ ವರ್ಷದ ಹುಲಿ‌ ಕುಣಿತ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಅಂಬಲಪಾಡಿ ದೇವಸ್ಥಾನದಲ್ಲಿ ಜರಗಿತು. ತುಳುನಾಡ ಟೈಗರ್ಸ್ ನ ರಾಜೇಶ್ ಸುವರ್ಣ, ಜಯಂತ್ ಸುವರ್ಣ, ದಿವಾಕರ್ ಪೂಜಾರಿ, ಪ್ರಸನ್ನ ಅಲೆವೂರು, ನಂದೀಶ್ ಪೂಜಾರಿ, ಪ್ರಸನ್ನ ಆಚಾರ್ಯ, ಶೇಖರ್, ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.