ಉಡುಪಿ ಗುಂಡಿಬೈಲು ಶ್ರೀ ನಾಗ ದೇವರ ಕಾರ್ಣಿಕ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ, ಬೊಂಡಾಭಿಷೇಕ.

ಉಡುಪಿ: ಗುಂಡಿಬೈಲು ಶ್ರೀ ನಾಗ ದೇವರ ಕಾರ್ಣಿಕ ದೇವಾಲಯದಲ್ಲಿ ಆ.9 ನಾಗ ಪಂಚಮಿ ಪ್ರಯುಕ್ತ ದೇವರ ಸನ್ನಿಧಾನದಲ್ಲಿ, ಪಂಚಾಮೃತ ಅಭಿಷೇಕ , ಸಾವಿರಾರು ಬೊಂಡಾಭಿಷೇಕ , ಶ್ರೀ ನಾಗದೇವರಿಗೆ ವಿಶೇಷ ಅಲಂಕಾರ , ಪಲ್ಲ ಪೂಜೆ , ಸಾರ್ವಜನಿಕ ಅನ್ನ ಸಂತರ್ಪಣ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರೂ ಭೋಜನ ಪ್ರಸಾದ ಸ್ವೀಕರಿಸಿದರು, ದೇವಳದ ದರ್ಶನ ಪಾತ್ರಿ ವಾಸುದೇವ ಪೈ, ಆಡಳಿತ ಮಂಡಳಿಯ ಸದಸ್ಯರು, ಅರ್ಚಕರು ಉಪಸ್ಥರಿದ್ದರು.