ಉಡುಪಿ: ಸರಕಾರಿ ಬಸ್ಸಿನಲ್ಲಿ ಕಳೆದು ಹೋದ ಬ್ಯಾಗ್ ಪತ್ತೆಹಚ್ಚಿ ಕರ್ತವ್ಯ ಪ್ರಜ್ಞೆ ಮೆರೆದ ಕಂಟ್ರೋಲ್ ರೂಮ್ ಸಿಬ್ಬಂದಿ

ಉಡುಪಿ: ಕೆಎಸ್ ಆರ್ ಟಿಸಿ ಬಸ್ ನಲ್ಲಿ ಕಳೆದು ಹೋದ ಅರ್ಚಕರೊಬ್ಬರ ನಗದು ಸಹಿತ ಬ್ಯಾಗ್ ಅನ್ನು ಪತ್ತೆ ಮಾಡುವ ಮೂಲಕ ಉಡುಪಿ ಎಸ್ಪಿ ಕಚೇರಿಯ ಕಂಟ್ರೋಲ್ ರೂಮ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರ್ಯಾಯ ಅರ್ಚಕರಾದ ಶ್ರೀಧರ ತಂತ್ರಿ ಕಳತ್ತೂರು ಅವರು ಸೋಮವಾರ ರಾತ್ರಿ 11ಗಂಟೆಗೆ ಮಂಗಳೂರಿನಿಂದ ಶಿರಸಿಗೆ ಹೋಗುವ ಸರಕಾರಿ ಬಸ್ ಹತ್ತಿದ್ದಾರೆ. 12 ಗಂಟೆಗೆ ಸುಮಾರಿಗೆ ಕಾಪುವಿನಲ್ಲಿ ಇಳಿದಿದ್ದಾರೆ. ಬಸ್ ಇಳಿಯುವ ಸಂದರ್ಭದಲ್ಲಿ 18 ಸಾವಿರ ನಗದು, […]