ಜಿಲ್ಲಾ ಸರಕಾರಿ ವಾಹನ ಚಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ

ಉಡುಪಿ: ಜಿಲ್ಲಾ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘ, ಸಾರಥಿ ಭವನ, ಉಡುಪಿ ಇದರ ಮಹಾಸಭೆಯು ಇತ್ತೀಚೆಗೆ ನಡೆದಿದ್ದು, ಸಭೆಯಲ್ಲಿ ಮುಂದಿನ 5 ವರ್ಷಗಳ ಅವಧಿಗೆ ಲೋಕೋಪಯೋಗಿ ಇಲಾಖೆಯ ಜಬಿಯುಲ್ಲಾಖಾನ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಆರೋಗ್ಯ ಇಲಾಖೆಯ ಧರ್ಮೇಂದ್ರ ಎಸ್, ಕಾರ್ಯದರ್ಶಿಯಾಗಿ ಸಮಾಜ ಕಲ್ಯಾಣ ಇಲಾಖೆಯ ದಾಮೋದರ, ಖಜಾಂಜಿಯಾಗಿ ಅಬಕಾರಿ ಇಲಾಖೆಯ ದಿನೇಶ್, ಸಂಘಟನಾ ಕಾರ್ಯದರ್ಶಿಯಾಗಿ ಸಣ್ಣ ನೀರಾವರಿ ಇಲಾಖೆಯ ಟಿ.ಕೆ ದೇವದಾಸ್, ಜೊತೆ ಕಾರ್ಯದರ್ಶಿಯಾಗಿ ಆರೋಗ್ಯ ಇಲಾಖೆಯ ಸತೀಶ್ ಕೆ ಮತ್ತು […]