ಉಡುಪಿ: ಸರಕಾರಿ ಬಸ್‌ನ ಮೆಟ್ಟಿಲು ತುಂಡು; ವೀಡಿಯೋ ವೈರಲ್
ಉಡುಪಿ: ಉಡುಪಿ ಜಿಲ್ಲೆಯ ಈ ವರ್ಷ ವಾಡಿಕೆಗಿಂತ ಜಾಸ್ತಿ ಮಳೆ ಸುರಿದಿದೆ. ಇದರಿಂದಾಗಿ ರಸ್ತೆ ವಿಪರೀತ ಹೊಂಡಗಳಿಂದ ತುಂಬಿದ್ದು ಸವಾರರು ಪರದಾಡುತ್ತಿದ್ದಾರೆ. ಇದೇ ವೇಳೆ ಹದಗೆಟ್ಟ ರಸ್ತೆಯಿಂದಾಗಿ ವಾಹನಗಳಿಗೂ ಸಾಕಷ್ಟು ಹಾನಿ ಉಂಟಾಗುತ್ತಿದೆ. ಉಡುಪಿ- ಕಾರ್ಕಳ ನಡುವೆ ಸಂಚರಿಸುವ ಸರಕಾರಿ ಬಸ್ಸೊಂದರ ಮೆಟ್ಟಿಲು ಸಂಪೂರ್ಣ ತುಂಡಾಗಿದ್ದು, ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದೆ. ಈ ಬಸ್ಸಿನಲ್ಲಿ ಪ್ರಯಾಣ ಉಚಿತ, ಅಪಾಯ ಖಚಿತ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ. ಇದೇ ವೇಳೆ ಈ ವೈರಲ್ ವಿಡಿಯೋ ಸಂಬಂಧಪಟ್ಟ […]