ವಿಶ್ವಶಾಂತಿಗೆ ಜಿನೇವಾ ಒಪ್ಪಂದದ ಕೊಡುಗೆ ಅಪಾರ:ಚಿಂತಕ ಡಾ. ಪ್ರಸಾದ್ ರಾವ್

ಉಡುಪಿ:1864 ರ ಜಿನೇವಾ ಒಪ್ಪಂದವು ವಿಶ್ವಶಾಂತಿಗೆ ನೀಡಿದ ಕೊಡುಗೆ ಮಹತ್ವದ್ದಾಗಿದೆ. ಎಲ್ಲಾ ದೇಶಗಳ ಸೈನಿಕರಿಗೆ ಆರೈಕೆ ಹಾಗೂ ಮೃತ ಸೈನಿಕರಿಗೆ ಗೌರವಯುತವಾದ ಅಂತ್ಯ ಸಂಸ್ಕಾರಕ್ಕೆ ದೇಶಗಳು ಒಡಂಬಡಿಕೆಗೆ ಬಂದ ಮಹತ್ವದ ಒಪ್ಪಂದಗಳು ಜಿನೇವಾ ಒಪ್ಪಂದಗಳಾಗಿವೆ. ಸೆರೆಯಾದಸೈನಿಕರನ್ನು ಸಂಬಂಧಿಸಿದ ದೇಶಗಳಿಗೆ ಒಪ್ಪಿಸಲು ಈ ಒಪ್ಪಂದವು ಕಾರಣವಾಗಿದೆ. ರೆಡ್ ಕ್ರಾಸ್‌ನ ಉದಯಕ್ಕೆ ಈ ಒಪ್ಪಂದವು ಮೂಲ ಕಾರಣವಾಗಿದೆ ಎಂದು ಚಿಂತಕ ಮತ್ತು ರಂಗತಜ್ಞ ಡಾ. ಪ್ರಸಾದ್ ರಾವ್ಹೇಳಿದರು. ಅವರು ಸೋಮವಾರ ನಗರದ ಬ್ರಹ್ಮಗಿರಿಯ ರೆಡ್‌ ಕ್ರಾಸ್‌ ಭವನದಲ್ಲಿ ವಿಶ್ವಶಾಂತಿಗಾಗಿ ಜಿನೇವಾ […]