ಲೋಕೋಪಯೋಗಿ ಗುತ್ತಿಗೆದಾರ ಪಿ.ಎನ್. ಶಶಿಧರ ರಾಯರ ಪತ್ನಿ ಗೀತಾ ಎಸ್. ರಾವ್ ನಿಧನ
ಉಡುಪಿ: ಉಡುಪಿಯ ಲೋಕೋಪಯೋಗಿ ಗುತ್ತಿಗೆದಾರ, ಪೆರಂಪಳ್ಳಿ ಎಡ್ಮೇರಿ ಬೊಬ್ಬರ್ಯ ದೈವಸ್ಥಾನದ ಆಡಳಿತ ಮೊಕ್ತೇಸರ ಪಿ.ಎನ್. ಶಶಿಧರ ರಾಯರ ಪತ್ನಿ ಗೀತಾ ಎಸ್. ರಾವ್ (61) ಅವರು ಅನಾರೋಗ್ಯದಿಂದ ಇಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ .