ಉಡುಪಿ: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಐದು ಟಿಪ್ಪರ್ ವಶ

ಉಡುಪಿ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಮಿನಿ ಟಿಪ್ಪರ್‌ ಸಹಿತ ಒಟ್ಟು ಐದು ಟಿಪ್ಪರ್ ಗಳನ್ನು ಗಣಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಗಣಿ ಅಧಿಕಾರಿಗಳಾದ ಸಂದೀಪ್‌ ಪಾಟೀಲ್ ಹಾಗೂ ಮಹೇಶ್‌ ಅವರ ನೇತೃತ್ವದ ತಂಡ ದಾಳಿ ನಡೆಸಿದೆ. ಪೆರಂಪಳ್ಳಿ ಜಂಕ್ಷನ್‌ ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಮಿನಿ ಟಿಪ್ಪರ್‌ ಅಡ್ಡಹಾಕಿ ನಿಲ್ಲಿಸಿ, ಟಿಪ್ಪರ್ […]