ಸುಳ್ಳು ಕೇಸ್ ದಾಖಲಿಸಿ ರಿಕ್ಷಾ ಚಾಲಕರ ಶಾಂತಿಯನ್ನು ಕದಡುವ ಯತ್ನ :ಆರೋಪ
ಉಡುಪಿ : ಅನೇಕ ಅಧಿಕೃತ ನೋಂದಾಯಿತ ರಿಕ್ಷಾ ನಿಲ್ದಾಣಗಳಲ್ಲಿ ಪರವಾನಿಗೆಗಳಿಲ್ಲದ, ಅನಧಿಕೃತ ರಿಕ್ಷಾ ಚಾಲಕರು ಬಂದು ಬೇಕಾಬಿಟ್ಟಿಯಾಗಿ ಬಾಡಿಗೆಗಳನ್ನು ಮಾಡುತ್ತಿದ್ದು ಅಧಿಕೃತ ರಿಕ್ಷಾ ಚಾಲಕ ಮಾಲಕರಿಗೆ ಉಪಟಳ ನೀಡುತ್ತಿರುವುದಲ್ಲದೆ ಅವರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಸುಳ್ಳು ಕೇಸುಗಳನ್ನು ದಾಖಲಿಸಿ ರಿಕ್ಷಾ ಚಾಲಕರ ಶಾಂತಿಯನ್ನು ಕದಡುವ ಯತ್ನ ನಡೆಸಲಾಗುತ್ತಿದೆ ಎಂದು ಜಿಲ್ಲಾ ರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟದ ಕಾರ್ಯಾಧ್ಯಕ್ಷ ಸುರೇಶ ಅಮೀನ್ ಆರೋಪಿಸಿದ್ದಾರೆ. ಅವರು ಬುಧವಾರ ಉಡುಪಿ ಠಾಣೆಯಲ್ಲಿ ತಮ್ಮ ಸಂಘಟನೆಗಳ ಒಕ್ಕೂಟದ ಸದಸ್ಯರ ಮೇಲಿನ […]