ವಿಧಾನಸಭಾ ಚುನಾವಣೆ: ಉಡುಪಿ ಜಿಲ್ಲೆಗೆ ಪ್ಯಾರಾ ಮಿಲಿಟರಿ ಪಡೆ ಆಗಮನ
ಉಡುಪಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಗೆ ಮಂಗಳವಾರ ತಡರಾತ್ರಿ ಸೆಂಟ್ರಲ್ ಪ್ಯಾರಾ ಮಿಲಿಟರಿ ಪಡೆ ಆಗಮನವಾಗಿದೆ.ಅಸ್ಸಾಂನಿಂದ 4 ಕಂಪೆನಿಯ 400 ಮಂದಿ ಆಗಮಿಸಿದ್ದಾರೆ. ಒಂದು ತಂಡದಲ್ಲಿ 100 ಮಂದಿ ಇರಲಿದ್ದು, ಆಗಮಿಸಿರುವ 3 ತಂಡದಲ್ಲಿ 300 ಮಂದಿ ಪುರುಷರಿದ್ದರೆ.ಮತ್ತೂಂದು ತಂಡದಲ್ಲಿ ಮಹಿಳಾ ಸಿಬಂದಿ ಇದ್ದಾರೆ. ಚುನಾವಣೆ ನಿಮಿತ್ತ ರಾಜ್ಯಕ್ಕೆ 20 ಸಾವಿರ ಪ್ಯಾರಾ ಮಿಲಿಟರಿ ಸಿಬಂದಿ ಆವಶ್ಯಕತೆಯಿದ್ದು, ಮುಂದಿನ ಹಂತದಲ್ಲಿ ಇತರ ತಂಡಗಳು ಆಗಮಿಸಲಿವೆ. ಇವರನ್ನು ಕಾಪು, ಕಾರ್ಕಳ, ಉಡುಪಿ, ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಿಯೋಜಿಸಲಾಗುತ್ತದೆ. ಕುಂದಾಪುರ […]