ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ಗಾಂಧೀಜಿ ಪುಣ್ಯಸ್ಮರಣೆ
ಉಡುಪಿ: ಮಹಾತ್ಮಾ ಗಾಂಧಿಜಿಯವರ ತತ್ವಾದರ್ಶಗಳು ಮತ್ತು ನಾಯಕತ್ವ ಸಮಾಜಕ್ಕೆ ಎಂದೆಂದಿಗೂ ಪ್ರಸ್ತುತವಾಗಿದೆ. ತನ್ನ ಸರಳತೆ, ಸತ್ಯ ನಿಷ್ಠೆ, ಅಹಿಂಸಾ ತತ್ವ ಮತ್ತು ಪ್ರಾಮಾಣಿಕತೆಯಿಂದ ಇಂದು ಇಡೀ ವಿಶ್ವಕ್ಕೆ ಮಾದರಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಶನಿವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಆಯೋಜಿಸಿದ ಹುತಾತ್ಮ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಎಲ್ಲರೂ ಪ್ರೀತಿಸಬಹುದಾಗಿದ್ದ ವ್ಯಕ್ತಿತ್ವ ಶಕ್ತಿಯನ್ನು ಹೊಂದಿದ್ದ ಮಹಾತ್ಮಾಗಾಂಧೀ ದೇಶದ […]